ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ನೇಣಿಗೆ ಕೊರಳೊಡ್ಡಿದ ಯುವತಿ ; ಭಾವಿ ಪತಿಯೇ ಅರೆಸ್ಟ್!?

ಇನ್ನೇನು ಮದುವೆ ಆಗಬೇಕಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಭಾವಿ ಪತಿಯನ್ನೇ ಬಂಧಿಸಿರುವ ಘಟನೆ ನಡೆದಿದೆ.

ಮಾನ್ಯ (22) ಮೃತ ಯುವತಿ. ಆರೋಪಿ ಅಶ್ವಿನ್​ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಥ್ರಿಕ್ಕಾಲಯೂರ್​ ಮೂಲದ ಮಾನ್ಯ, ಕಳೆದ ಜೂನ್​ನಲ್ಲಿ ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ, ತನ್ನ ಮನೆಯ ಬೆಡ್​ರೂಪ್​ನಲ್ಲಿ ನೇಣಿಗೆ ಶರಣಾಗಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಭಾವಿ ಪತಿಯನ್ನು ಎರಡು ತಿಂಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

‘ನಮ್ಮ ಮಗಳು ಸಾವಿನ ಬಗ್ಗೆ ನಮಗೆ ಅನುಮಾನ ಇದೆ ಮತ್ತು ಈ ಪ್ರಕರಣದ ತನಿಖೆ ಆಗಬೇಕೆಂದು’ ಮಾನ್ಯ ಕುಟುಂಬ ಆರೋಪ ಮಾಡಿದ ಬಳಿಕ ಅರೀಕೋಡ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಅಶ್ವಿನ್​ ಕಿರುಕುಳದಿಂದಲೇ ಮಾನ್ಯ ಮೃತಪಟ್ಟಿರುವುದು ಮೊಬೈಲ್​ನಿಂದ ಬಹಿರಂಗವಾಗಿದೆ.

ಮಾನ್ಯ ಅವರು ಬಳಸುತ್ತಿದ್ದ ಫೋನ್‌ನಿಂದ ಅವರ ಧ್ವನಿ ಸಂದೇಶಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. 2021ರ ಸೆಪ್ಟೆಂಬರ್​ನಲ್ಲಿ ನಿಶ್ಚಿತಾರ್ಥ ಆಗುವ ಮುನ್ನ ಕಳೆದ 8 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಕೆಲಸಕ್ಕೆಂದು ಅಶ್ವಿನ್​ ವಿದೇಶಕ್ಕೆ ಹೋಗಿದ್ದ. ಇದರ ನಡುವೆ ಇಬ್ಬರ ಪ್ರೀತಿಯಲ್ಲಿ ಸಾಕಷ್ಟು ಏರಿಳಿತಗಳ ಸಂಭವಿಸಿದ್ದವು. ಮದುವೆಯಿಂದ ದೂರ ಉಳಿಯುವ ಅಶ್ವಿನ್ ನಿರ್ಧಾರದಿಂದ ಬೇಸತ್ತು ಮಾನ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ವಿದೇಶದಿಂದ ಮರಳಿದ ನಂತರ ಆರೋಪಿ ಅಶ್ವಿನ್​ನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

Leave A Reply

Your email address will not be published.