ಮೈಸೂರಿನಿಂದ ಊರಿಗೆ ಬಂದು ಮನೆಯಲ್ಲಿ ಬೋರಾಗಿ ನೆಂಟರ ಮನೆಗೆ ಗಮ್ಮತ್ತು ಮಾಡಲು ಹೋಗಿ ಎಲ್ಲರನ್ನೂ ಕ್ವಾರಂಟೈನ್ ಗೆ ತಳ್ಳಿದ
ಮೈಸೂರಿನ ಯುವಕನೋರ್ವ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ ಡೌನ್ ನ ಬಂಧನದಿಂದ ಸ್ವಾತಂತ್ರ್ಯವನ್ನು ಪಡೆಯುವ ಕಾರಣದಿಂದ ಊರಿನ ಕಡೆ ಬರುವ ಯಾವುದೋ ಗೂಡ್ಸ್ ಲಾರಿ ಹತ್ತಿ ತನ್ನ ಸ್ವಂತ ಊರಾದ ಸುಳ್ಯವನ್ನು ತಲುಪಿದ. ಆದರೆ ಮನೆಯಲ್ಲಿ ಸುಮ್ಮನೆ ಇದ್ದು 14 ದಿನ ಕಳೆದಿದ್ದರೆ ಇಂತಹ ಸುದ್ದಿ ಪ್ರಚಾರ ಆಗುತಿಲ್ಲವಾದೀತೇನೋ ?
ಆತನಿಗೆ ನಾಲ್ಕು ದಿನ ಕಳೆಯುವಷ್ಟರಲ್ಲಿ ಮನೆಯೂ ಬೋರಾಗಿದೆ. ಹಾಗೆ ಈ ಲಾಕ್ ಡೌನ್ ನ ರಜೆಯಲ್ಲಿ ನೆಂಟರ ಮನೆಗೆ ಹೋಗಿ ‘ಬಿನ್ನೆರೆ ‘ ಕಟ್ಟಿ ಬರೋಣ, ಗಮ್ಮತ್ತು ಅಂತ ಹೊರಟಿದ್ದಾನೆ.
ಹಾಗೆ ಸುಬ್ರಮಣ್ಯದ ತನ್ನ ಸಂಬಂಧಿಕರ ಮನೆಗೆ ಬಂದಿದ್ದ. ಇದನ್ನು ಗಮನಿಸಿದ ಸುಬ್ರಹ್ಮಣ್ಯದ ಸ್ಥಳೀಯರು ಭಯಗೊಂಡು ಇವನು ಅದೆಲ್ಲಿ ಕೊರೋನಾ ಸ್ಯಾಂಪಲ್ ಅನ್ನು ಸುಬ್ರಹ್ಮಣ್ಯದಲ್ಲೂ ಹರಡಲು ಬಂದನೋ ಎನ್ನುವ ಭಯದಿಂದ ಸ್ಥಳೀಯ ಆಡಳಿತಕ್ಕೆ ತಿಳಿಸಿದ್ದಾರೆ. ವಿಚಾರಣೆ ನಡೆಸಿದ ಅವರು ಆತನನ್ನೂ ಸೇರಿಸಿ
ಆತನ ಮನೆ ಮಂದಿಯನ್ನು ಹಾಗೂ ಸಂಬಂಧಿಕರನ್ನು ಕ್ವಾರೆಂಟೈನ್ ಗೆ ಕಳಿಸಿ ಸೀಲ್ ಹಾಕಿದ್ದಾರೆ.
ಲಾಕ್ ಡೌನ್ ಬಂಧನದಿಂದ ತಪ್ಪಿಸಿಕೊಳ್ಳಲು ಮೈಸೂರಿನಿಂದ ಬಂದವನು ತಾನು ಮಾತ್ರವಲ್ಲದೆ, ಎಲ್ಲರ ಸ್ವಾತಂತ್ರ್ಯವನ್ನೂ ಕಸಿದಿದ್ದಾನೆ.