ಕಡಬ | ಕಳಾರ ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ,ಇಬ್ಬರ ಬಂಧನ,ದನ,ಮಾಂಸ ವಶಕ್ಕೆ

ಕಡಬ: ಕಡಬ ಕಳಾರ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದ ಕಡಬ ಎಸ್.ಐ ರುಕ್ಮ ನಾಯಕ್ ನೇತೃತ್ವದಲ್ಲಿ ಪೊಲೀಸ್ ತಂಡ ದನ ,ದನದ ಮಾಂಸ ಸಹಿತ ಇಬ್ಬರನ್ನು ಬಂಧಿಸಿದ ಘಟನೆ ಎ. 22 ರಂದು ನಡೆದಿದೆ.

ಕಳಾರದ ಜಾಬೀರ್ ಹಾಗೂ ಆಸೀರ್ ಎಂಬವರು ಬಂಧಿತ ಆರೋಪಿಗಳು.

ಎಸ್.ಐ. ರುಕ್ಮ ನಾಯ್ಕ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಭವಿತ್ ರೈ, ಶಿವರಾಜ್, ಕನಕರಾಜ್, ಮೋನಪ್ಪ, ಮಹೇಶ್, ರಮೇಶ ಗೃಹರಕ್ಷಕ ಸಿಬ್ಬಂದಿಗಳಾದ ಲೋಲಾಕ್ಷ, ಯೋಗೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.