ಲಾಯಿಲಾದ ಹೋಟೆಲ್ ಪ್ರಿಯಾದಲ್ಲಿ ಇಂದು ಮಧ್ಯಾಹ್ನ ಬೆಂಕಿ ಆಕಸ್ಮಿಕ

ಲಾಯಿಲಾದ ಹೋಟೆಲ್ ಪ್ರಿಯಾದಲ್ಲಿ ಇಂದು ಮಧ್ಯಾಹ್ನ ಬೆಂಕಿ ಅವಗಢ ಸಂಭವಿಸಿದೆ.

ಲಾಯಿಲಾದಲ್ಲಿರುವ ಪೆಟ್ರೋಲ್ ಪಂಪನಿಂದ ಕೇವಲ 25 ಮೀಟರ್ ದೂರದಲ್ಲಿರುವ ಈ ಹೋಟೆಲಿಗೆ ಬೆಂಕಿ ತಗುಲಿ ಕಾರಣದಿಂದ ಒಂದು ಬಾರಿ ಆತಂಕ ಸೃಷ್ಟಿಯಾಗಿತ್ತು.

ಆದರೆ ಸಕಾಲದಲ್ಲಿ ಅಗ್ನಿಶಾಮಕ ದಳ ಮತ್ತು ಸ್ಥಳೀ ಯರು ಬಂದು ಬೆಂಕಿ ಆರಿಸಿದರು. ಲಾಕ್ ಡೌನ್ಲೋಡ್ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಹೋಟೆಲ್ ಬಂದಾಗಿತ್ತು. ಇದೀಗ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ತಾಲೂಕು ಪಂಚಾಯತ್ ಸದಸ್ಯ ಸುಧಾಕರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ಡೊಂಗ್ರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣ ರಾಜ ಮತ್ತು ಕಾರ್ಯದರ್ಶಿ ರೇಷ್ಮಾಆಗಮಿಸಿದರು.

Leave A Reply

Your email address will not be published.