ಕ್ಯಾನ್ ಮಗುಚಿ ಹಾಲು ಚೆಲ್ಲಿ ಬೀದಿ ನಾಯಿಗಳು ಹಾಲು ನೆಕ್ಕುತ್ತಿದ್ದವು | ಮತ್ತೊಂದು ತುದಿಯಲ್ಲಿ ಮನುಷ್ಯ ಅದೇ ಹಾಲನ್ನು ತುಂಬಿಕೊಳ್ಳುತ್ತಿದ್ದ | ಪತ್ರಕರ್ತ ಸುದ್ದಿ ತಿರುಚಿ ಬರೆಯುತ್ತಿದ್ದ


ಉತ್ತರ ಪ್ರದೇಶದಲ್ಲಿ ಮನಕಲಕುವ ದೃಶ್ಯ
ವೊಂದು ( !! ) ಕಣ್ಣಿಗೆ ಬಿದ್ದಿದ್ದು ಅದನ್ನು ಒಬ್ಬರು ತಮ್ಮ ಟ್ವಿಟ್ಟರಿನಲ್ಲಿ ಬಿತ್ತರಿಸಿದ್ದಾರೆ.

ಆಗ್ರಾದ ರಾಮ್ ಭಾಗ್ ನಲ್ಲಿ, ತಾಜ್ ಮಹಲ್ ಗಿಂತ ಕೇವಲ ಐದಾರು ಕಿಲೋಮೀಟರ್ ಗಳ ದೂರದಲ್ಲಿ ಹಾಲಿನ ದೊಡ್ಡ ಪಾತ್ರೆಯೊಂದು ಒಂದು ಮಗುಚಿ ಬಿದ್ದಿತ್ತು. ಅದರಿಂದ ಹಾಲು ಚೆಲ್ಲಿ ರಸ್ತೆಯಲ್ಲಿ ಹರಿದಿತ್ತು. ಆ ಸಮಯದಲ್ಲಿ ಒಂದು ಕಡೆ ಕೆಲವು ಬೀದಿ ನಾಯಿಗಳು ಆ ಚೆಲ್ಲಿ ಹೋದ ಹಾಲನ್ನು ಕುಡಿಯುತ್ತಿದ್ದವು. ಅತ್ತ ಅದೇ ಹಾಲನ್ನು ಮತ್ತೊಂದು ವ್ಯಕ್ತಿ ಇನ್ನೊಂದು ಬದಿಯಿಂದ ಬೊಗಸೆಯಲ್ಲಿ ಎತ್ತಿ ತನ್ನಲ್ಲಿ ಇರುವ ಪಾತ್ರೆಯೊಂದರಲ್ಲಿ ತುಂಬಿಸಲು ಪ್ರಾರಂಭಿಸಿದ್ದ.

ಈ ಘಟನೆಯನ್ನು ಟ್ವೀಟ್ ಮಾಡಿದ್ದು ಕಮಲ್ ಖಾನ್  ಎಂಬ NDTV ಯ ವರದಿಗಾರ. ತಮ್ಮಸ್ವಾರ್ಥಕ್ಕಾಗಿ ವಿನಾ ಕಾರಣ ಮೋದಿಯನ್ನು ವಿರೋಧಿಸುತ್ತಲೇ ಬಂದ NDTV ಆನ್ ಲೈನ್ ಪತ್ರಿಕೆಯಲ್ಲಿ ಆತ ಬರೆಯುತ್ತಾರೆ : ” 21 ದಿನಗಳ ಲಾಕ್ ಡೌನ್ ಭಾರತದ ಲಕ್ಷಾಂತರ ಜನರನ್ನು ಬಡತನಕ್ಕೆ ಮತ್ತು ಹಸಿವೆಗೆ ದೂಡಿದೆ ” ಕೇಂದ್ರ ಸರಕಾರವು ದೇಶದ 80 ಕೋಟಿ ಜನರಿಗೆ ನೇರವಾಗಿ ಹಣ ವರ್ಗಾವಣೆ ಮತ್ತು ಇತರ  ಸಬ್ಸಿಡಿಯಲ್ಲಿ ಆಹಾರ ಪದಾರ್ಥವನ್ನು ಕೊಟ್ಟಿದೆ ಎನ್ನುತ್ತಿದ್ದಾರೆ. ಆದರೆ NDTV ಸಂದರ್ಶಿಸಿದ ವ್ಯಕ್ತಿಗಳು ‘ನಮಗೆ ಏನೂ ಸಿಕ್ಕಿಲ್ಲ, ಅಥವಾ ಅತ್ಯಂತ ಕಡಿಮೆ ಸಿಕ್ಕಿದೆ ‘ ಅಂದಿದ್ದಾರೆ. ಕೆಲವರು ಸರಕಾರದ ಬೆನಿಫಿಟ್ಸ್ ಅನ್ನು ಪಡೆಯುವ ಸಂದರ್ಭಗಳಲ್ಲಿ ಬಿಸಿಲಿನಲ್ಲಿ ನಿಲ್ಲಬೇಕಾಗಿದೆ ಬಂದಿದೆ ಮತ್ತು ಏಟು ತಿಂದಿದ್ದಾರೆ ಎಂದು ಬರೆಯುತ್ತಾರೆ.

ಈ ಘಟನೆ ನಡೆಯಬಾರದಿತ್ತು. ಮನುಷ್ಯರಾಗಿ ನಾವು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ವ್ಯಕ್ತಿ ಹಾಲು ಕುಡಿದಿಲ್ಲ. ಆತನೊಬ್ಬ ಮತಿ ಭ್ರಮಿತ ವ್ಯಕ್ತಿಯಂತೆ ಕಾಣುತ್ತಿದ್ದಾನೆ. ಬಡವನಂತೂ ಸತ್ಯ. ಘಟನೆಯ ವಿಡಿಯೋದಲ್ಲಿ ಕಂಡಂತೆ ಆತ ಹಸಿವೆಯಿಂದ ಮಾತ್ರ ಹಾಗೆ ಹಾಲು ತುಂಬಿಕೊಂಡಿದ್ದಾನೆ ಅಂತ ಖಚಿತವಾಗಿ ಅನ್ನಿಸುವುತ್ತಿಲ್ಲ. ಹುಚ್ಚನಾಗಿರುವ ಸಾಧ್ಯತೆ ಇರುವ ಆತ ಹಾಗೆ ಹಾಲು ಬೊಗಸೆಯಲ್ಲಿ ಎತ್ತಿಕೊಳ್ಳುವುದನ್ನು , ಅದು ಲಾಕ್ ಡೌನ್ ನ ಇಂಪ್ಯಾಕ್ಟ್ ಅಂತ ಬರೆಯುವ ಮನಸ್ಥಿತಿಗೆ ನಾವು ಏನನ್ನಬೇಕು ? ಇದು ಲಾಕ್ ಡೌನ್ ನ ಇಂಪ್ಯಾಕ್ಟ್ ಹೇಗಾಗುತ್ತದೆ ? ಲಾಕ್ ಡೌನ್ ಆದ ಕಾರಣದಿಂದ ಹಾಲಿನ ಕ್ಯಾನ್ ಮಗುಚಿತಾ ? ಒಂದು ವೇಳೆ ನಿಜವಾಗಿಯೂ ಆತ ಹಸಿವೆಯಿಂದಲೆ ಹಾಲು ಬಾಚಿಕೊಂಡ ಅಂದುಕೊಳ್ಳೋಣ. ಅದು ಲಾಕ್ ಡೌನ್ನ ಕಾರಣದಿಂದ ಆದ ಹಸಿವೆ ಎಂದು ಕಮಲ್ ಖಾನ್ ಯಾಕೆ ಭ್ರಮಿಸಬೇಕು ?

ಒಂದು ಸುದ್ದಿಯನ್ನು ಯಾವ ರೀತಿ ಕೂಡಾ ತಿರುಚಿ ಬರೆಯಬಹುದು ಎನ್ನುವುದಕ್ಕೆ ಇದು ಒಂದು ಒಳ್ಳೆಯ ಉದಾಹರೆಯಾಗಿದೆ. ಇಂತಹ ಪತ್ರಿಕೆಗಳನ್ನು ದೂರವಿಟ್ಟಷ್ಟು ಒಳ್ಳೆಯದು.

Comments are closed.