ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ ಡಾ॥ಬಿಆರ್ ಅಂಬೇಡ್ಕರ್ 129 ನೇ ಜನ್ಮದಿನೋತ್ಸವದ ಆಚರಣೆ

ವರದಿ : ಹಸೈನಾರ್ ಜಯನಗರ

ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 129 ನೇ ಜನ್ಮದಿನೋತ್ಸವದ ಸ್ಮರಣೆಯ ಸಂದರ್ಭದಲ್ಲಿ ಮನೆ ಹಳ್ಳಿ ಅಥವಾ ಕಛೇರಿ ಸೇರಿದಂತೆ ಎಲ್ಲೇ ಇದ್ದರೂ ದಿನಾಂಕ 14ರ ಬೆಳಿಗ್ಗೆ ಸರಿಯಾಗಿ 11:00 ಗಂಟೆಗೆ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಸಂವಿಧಾನದ ಮೇಲೆ ನಮ್ಮ ನಿಷ್ಠೆಯನ್ನು ಪುನರ್ ಪ್ರತಿಷ್ಠಾಪಿಸುವ ಕೆಲಸ ಮಾಡಬೇಕಿದೆ ಎಂಬ ಕೆಪಿಸಿಸಿ ಸುತ್ತೋಲೆಯ ಅನ್ವಯ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೋಧನಾ ವಿಧಿ ಕಾರ್ಯಕ್ರಮ ಇಂದು ನಡೆಸಲಾಯಿತು.

ಸಾಮಾಜಿಕ ಅಂತರವನ್ನು ಕಾಯ್ದುಕೊಂಡ ಈ ಕಾರ್ಯಕ್ರಮದಲ್ಲಿ ಸುಳ್ಯ ಕೆಲವೇ ಕೆಲವು ಗಣ್ಯರು ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಪತ್ರಿಕಾ ವಕ್ತಾರ ನಂದರಾಜ ಸಂಕೇಶ್ ಬೋಧನಾ ಪತ್ರವನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪಗೌಡ, ರಾಜ್ಯ ಅಲ್ಪಸಂಖ್ಯಾತ ಘಟಕದ ಮಾಜಿ ಕಾರ್ಯದರ್ಶಿ ಸಂಸುದ್ದಿನ್, ಸುಳ್ಯ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೋಕೋ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆಎಂ ಮುಸ್ತಫ ಜನತಾ, ಶಾಪಿ ಕುತ್ತ ಮಟ್ಟೆ, ಮೊದಲಾದವರು ಉಪಸ್ಥಿತರಿದ್ದರು.

ಕೆಎಂ ಮುಸ್ತಫ ಜನತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Comments are closed.