ಸುಳ್ಯ ಆಶ್ರಯ ಪೌಂಡೇಶನ್ ಸ್ಥಾಪನಾ ದಿನ ಅಂಗವಾಗಿ ಪೌಷ್ಟಿಕ ಪದಾರ್ಥಗಳ ವಿತರಣೆ

ವರದಿ : ಹಸೈನಾರ್ ಜಯನಗರ

ಸುಳ್ಯ ಆಶ್ರಯ ಪೌಂಡೇಶನ್ ಸ್ಥಾಪನಾ ದಿನ ಅಂಗವಾಗಿ ಪೌಷ್ಟಿಕ ಪದಾರ್ಥಗಳ ವಿತರಣೆ ನಡೆಯಿತು. ಕೊರೋಣ ವೈರಸ್ ಜಗತ್ತಿನಾದ್ಯಂತ ತಲ್ಲಣವನ್ನು ಸೃಷ್ಟಿಸಿದ್ದು ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನಸಾಮಾನ್ಯರು ದುಡಿಮೆ ಗಳಿಲ್ಲದೆ, ಕೂಲಿಕಾರ್ಮಿಕರು, ಬಡವರು , ಕೆಲವು ಮಧ್ಯಮ ವರ್ಗದವರು ಒಪ್ಪೊತ್ತಿನ ಊಟಕ್ಕಾಗಿ ಚಿಂತಿಸುವ ಕಾಲವಿದು.ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಜಿಲ್ಲಾಡಳಿತ ತಾಲೂಕು ಆಡಳಿತ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ಸಹಾಯವನ್ನು ನೀಡುತ್ತಿದೆ.

ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಿರುವ ಹಲವಾರು ಧಾರ್ಮಿಕಸಂಘಟನೆಗಳು ,ಸಂಘ-ಸಂಸ್ಥೆಗಳು, ಚಾರಿಟೇಬಲ್ ಟ್ರಸ್ಟ್ ಗಳು, ಬಡಜನತೆಯ ಹಸಿವನ್ನು ನೀಗಿಸಲು ನಾ ಮುಂದು ತಾ ಮುಂದು ಎಂದು ಬಡಜನತೆಯ ಕಣ್ಣೀರು ಒರೆಸುವಲ್ಲಿ ಸಹಕಾರಿಯಾಗುತ್ತಿದೆ. ಇದೇ ಹಿತದೃಷ್ಟಿಯಲ್ಲಿ ಸುಳ್ಯದಲ್ಲಿ ಇಂದು ಆರಂಭ ಗೊಂಡ ಆಶ್ರಯ ಫೌಂಡೇಶನ್ ಸ್ಥಾಪಕ ಶರೀಫ್ ಕಂಠಿ ರವರ ನೇತೃತ್ವದಲ್ಲಿ ನಾವೂರು ವಾರ್ಡಿನ ಸುಮಾರು 120ಕ್ಕೂ ಹೆಚ್ಚು ಮನೆಗಳಿಗೆ ಪೌಷ್ಟಿಕ ಪದಾರ್ಥಗಳಾದ ಹಾಲು-ಮೊಟ್ಟೆ ಬಿಸ್ಕೆಟ್ ,ಬ್ರೆಡ್ ಗಳನ್ನು ಉಚಿತವಾಗಿ ವಿತರಿಸುವ ಮೂಲಕ ತಮ್ಮ ಸಂಸ್ಥೆಗೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಶರೀಫ್ ಕಂಠಿ, ರಫೀಕ್ ಬಿಎಂ ,ಹನೀಫ್ ಬೀಜ ಕೊಚ್ಚಿ ,ಶರೀಫ್ ಬೆಂಗಳೂರು, ಫೈಝಲ್ ಕಟ್ಟಿಕಾರ್ ,ನವಾಜ್ ಕಟ್ಟೇಕರ್ ,ಶರೀಫ್ ನಾವೂರು, ಫಾರಿಸ್ ಗಾಂಧಿನಗರ, ಮುಸ್ತಫ ಪಂಡಿತ್, ಮೊದಲಾದವರು ಉಪಸ್ಥಿತರಿದ್ದರು.

Comments are closed.