ಬೆಳ್ಳಾರೆ | ಮಹಿಳೆಗೆ ಆಹಾರ ಸಾಮಾಗ್ರಿ ಪೂರೈಸಿ ನೆರವಾದ ಪೊಲೀಸರು

ಸುಳ್ಯ :ಪೋಲೀಸರು ಒಂಟಿ ಮಹಿಳೆಯೋರ್ವರಿಗೆ ಆಹಾರ ದಿನಸಿ ಸಾಮಾನುಗಳನ್ನು ನೀಡಿ ಮಾನವೀಯತೆ ತೋರಿಸಿದ ಘಟನೆ ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಯ ಕಳಂಜ ಎಂಬಲ್ಲಿ ನಡೆದಿದೆ.

ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಯ ಕಳಂಜ ಎಂಬಲ್ಲಿ ವನಜಾಕ್ಷಿ ಎಂಬ ಒಂಟಿ ಮಹಿಳೆಯೋರ್ವರು ವಾಸವಾಗಿದ್ದಾರೆ. ಮೊದಲೇ ಕೈ ಮುರಿತಕ್ಕೆ ಒಳಗಾಗಿರುವ ಇವರು ಆಹಾರಕ್ಕಾಗಿ ತೊಂದರೆ ಎದುರಿಸುತ್ತಿರುವುದನ್ನು ಮನಗಂಡ ಬೆಳ್ಳಾರೆ ಠಾಣಾಧಿಕಾರಿ ಅಂಜನೇಯ ರೆಡ್ಡಿ ಮತ್ತು ಸಿಬ್ಬಂದಿಗಳು ಇವರಿಗೆ ಬೇಕಾದ ಆಹಾರ ಸಾಮಾಗ್ರಿಗಳು ತೆಗೆದುಕೊಂಡು ಬಂದು ಇಂದು ಇವರ ಮನೆಗೆ ತಲುಪಿಸಿದ್ದಾರೆ.

ಪೋಲೀಸರ ಕಾರ್ಯಕ್ಕೆ ಮಹಿಳೆಯು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Comments are closed.