ಲಾಕ್ ಡೌನ್ ವಿಸ್ತರಣೆ‌ | ಸಹಾಯಕ ಆಯುಕ್ತರು ನೀಡಿದ್ದ ಪಾಸ್ ಅವಧಿ ಮುಂದೂಡಿಕೆ

ಮಂಗಳೂರು: ದಕ್ಷಿಣಕನ್ನಡದಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಸಹಾಯಕ ಆಯುಕ್ತರು ನೀಡಿದ್ದ ಪಾಸ್ ಅವಧಿ ಮುಂದೂಡಿಕೆಯಾಗಿದೆ.

ಅಗತ್ಯ ವಸ್ತುಗಳ ಪೂರೈಕೆದಾರರಿಗೆ, ಮಾಧ್ಯಮ, ಟೆಲಿಕಾಂ, ಶೇರ್ ಮಾರುಕಟ್ಟೆ, ಆಸ್ಪತ್ರೆ ಸಿಬ್ಬಂದಿ ಹಾಗೂ ಇನ್ನಿತ್ತರ ಅಗತ್ಯ ವಸ್ತುಗಳ ಪೂರೈಕೆದಾರರಿಗೆ ದ.ಕ ಜಿಲ್ಲಾಡಳಿತ ಎ.14 ರವರೆಗೆ ನೀಡಿದ್ದ ಆನ್ ಲೈನ್ ಹಾಗೂ ಮ್ಯಾನುವೆಲ್ ಪಾಸ್ ಗಳ ಅವಧಿಯನ್ನು ಎ.20ರವರೆಗೆ ಮುಂದುವರಿಸಲಾಗಿದೆ.

ಪಾಸ್ ಗಳನ್ನು ಮರುನವಿಕರಣಗೊಳಿಸಲು ಎಸಿ ಮತ್ತು ಡಿಸಿ ಕಚೇರಿಗೆ ಜನತೆ ಬರುವುದನ್ನು ತಪ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಈ ಕುರಿತು ಮಂಗಳೂರು ಉಪವಿಭಾಗ( ಮದನ್ ಮೋಹನ್) ಹಾಗೂ ಪುತ್ತೂರು ಉಪ ವಿಭಾಗದ ( ಡಾ.ಯತೀಶ್ ಉಳ್ಳಾಲ್) ಸಹಾಯಕ ಆಯುಕ್ತರು ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ.

Comments are closed.