ನ್ಯಾಯಾಲಯದ ಆವರಣದಲ್ಲಿ ಗಲಾಟೆ!! ವಿವಾದಾತ್ಮಕ ವಕೀಲ ಜಗದೀಶ್ ಪೊಲೀಸರ ವಶಕ್ಕೆ latest By ಹೊಸಕನ್ನಡ ನ್ಯೂಸ್ On Feb 13, 2022 Share the Article ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ವಿಷಯಗಳನ್ನು ಬಿತ್ತರಿಸಿ ಸುದ್ದಿಯಲ್ಲಿರುವ ವಕೀಲ ಜಗದೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ. ನ್ಯಾಯಾಲಯದ ಅವರಣದಲ್ಲಿ ಗಲಾಟೆ ಮಾಡಿದ ಸಂಬಂಧ ಹಲಸೂರು ಗೇಟ್ ಠಾಣಾ ಪೊಲೀಸರು ಜಗದೀಶ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.