Bangalore: ಹಸುವಿನ ಕೆಚ್ಚಲು ಕೊಯ್ದು ವಿಕೃತಿ

Bangalore: ಹಸುವಿನ ಕೆಚ್ಚಲು ಕೊಯ್ದ ದಾರುಣ ಘಟನೆಯೊಂದ ಬೆಂಗಳೂರಿನ ದೊಡ್ಡ ಆಲದ ಮರ ಸಮೀಪ ಸೂಲಿವಾರದಲ್ಲಿ ನಡೆದಿದೆ. ದುಷ್ಕೃತ್ಯ ಮಾಡಿದ ಆರೋಪಿಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸೂಲಿವಾರದ ಡೇರಿ ಅಧ್ಯಕ್ಷರಾದ ಮರಿಬಸವಯ್ಯ ಎಂಬುವವರ ಹಸು ಇದಾಗಿದೆ. ಹಸುವನ್ನು ಪಕ್ಕದ ಜಮೀನಿಗೆ ಮೇಯಲೆಂದು ಹೋದಾಗ ಈ ಘಟನೆ ನಡೆದಿದೆ.
ಹಳೆಯ ವೈಷಮ್ಯದಿಂದ ಹಸುವಿನ ಕೆಚ್ಚಲು ಕೊಯ್ದಿದ್ದಾರೆ ಎಂದು ಮಾಲೀಕರು ಆರೋಪ ಮಾಡಿದ್ದಾರೆ. ಸುಮಾರು 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರೂ ಫಲಕಾರಿಯಾಗದೇ ಹಸು ಮೃತಪಟ್ಟಿದೆ.
Comments are closed.