Snake: ಫ್ರಿಡ್ಜ್ ಒಳಗೆ ಹೆಡೆಯೆತ್ತಿ ಕುಳಿತ ದೈತ್ಯಗಾತ್ರದ ನಾಗರಹಾವು!

Snake: ಉರಿ ಬಿಸಿಲಿಗೆ ವಿಷಜಂತುಗಳು ಶೂ ಒಳಗೆ ಅಥವಾ ಮನೆಯ ಸಂದಿಗಳಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇದಕ್ಕೆ ಸಂಬಂಧ ಪಟ್ಟ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿರುವುದನ್ನು ನೋಡಿರಬಹುದು. ಆದರೆ ಇಲ್ಲಿನ ವಿಡಿಯೋದಲ್ಲಿ ಮನೆಯ ಫ್ರಿಡ್ಜ್ ಒಳಗೆ ನಾಗರ ಹಾವೊಂದು ಹೆಡೆಯೆತ್ತಿ ಕುಳಿತು ಕೊಂಡಿದೆ.
ಈ ವಿಡಿಯೋದಲ್ಲಿ ಫ್ರಿಡ್ಜ್ ಬಾಗಿಲು ತೆರೆಯುತ್ತಿದ್ದಂತೆ ನಾಗರಹಾವೊಂದು ಹೆಡೆಯೆತ್ತಿ ಕುಳಿತುಕೊಂಡಿರುವುದನ್ನು ಕಾಣಬಹುದು. ದೂರ ನಿಂತುಕೊಂಡೆ ಮಹಿಳೆಯೊಬ್ಬರು ಬಾಗಿಲು ತೆಗೆದಿದ್ದಾರೆ. ಆದರೆ ಈ ನಾಗರಹಾವು ಎಲ್ಲಿಂದ ಬಂದಿತು? ಹೇಗೆ ಫ್ರಿಡ್ಜ್ ಯೊಳಗೆ ಬಂದಿತು? ಎನ್ನುವ ಬಗ್ಗೆ ಮಾಹಿತಿ ತಿಳಿದಿಲ್ಲ.
Comments are closed.