Stray Dog: ಬಿಬಿಎಂಪಿಯಿಂದ ಹೊಸ ರೂಲ್ಸ್ ಫಾಲೋ ಮಾಡಲು ಆದೇಶ! ಶ್ವಾನಪ್ರಿಯರು ಇನ್ನುಮುಂದೆ ಬೀದಿ ನಾಯಿಗೆ ಊಟ ಹಾಕುವಂತಿಲ್ಲ!
Stray Dog: ಶ್ವಾನಪ್ರಿಯರು ಬೀದಿ ನಾಯಿಗೆ ಇನ್ನುಮುಂದೆ ಊಟ ಹಾಕುವಂತಿಲ್ಲ. ಹೌದು, ಬೆಂಗಳೂರು ಮಂದಿ ತಮಗೆ ಇಷ್ಟ ಬಂದಾಗ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ (Stray Dog) ಊಟ ಹಾಕ್ತಿದ್ದು ಅದನ್ನು ತಿನ್ನಲು ಗುಂಪು ಸೇರುವ ನಾಯಿಗಳು ತಮ್ಮ ಪಕ್ಕ ಚಲಿಸುವ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ಬೀದಿ ನಾಯಿಗಳಿಗೆ ಊಟ ಹಾಕಲು ಊಟದ ಸಮಯ ಮತ್ತು ಸ್ಥಳವನ್ನು ಬಿಬಿಎಂಪಿ ನಿಗದಿ ಮಾಡಿದೆ.
ಇದನ್ನೂ ಓದಿ: Udupi: ಬೀಚ್‌ನಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ
ಸದ್ಯ ಬೆಂಗಳೂರಲ್ಲಿ ಬೀದಿನಾಯಿಗಳ ದಾಳಿ ಪ್ರಕರಣ ಕಡಿಮೆ ಮಾಡಲು ಕ್ರಮವಹಿಸಿರುವ ಪಾಲಿಕೆ, ಇದೀಗ ಬೀದಿನಾಯಿಗಳಿಗೆ ಊಟ ಹಾಕೋದರಿಂದ ಆಗೋ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾಗಿದೆ. ಹೌದು, ತಮ್ಮ ಮನೆ ಬಳಿ, ಅಂಪಾರ್ಟ್ ಮೆಂಟ್ಗಳ ಖಾಲಿ ಜಾಗದಲ್ಲೋ ಬೀದಿನಾಯಿಗೆ ಊಟ ಹಾಕುತ್ತಿದ್ದವರು ಇನ್ಮುಂದೆ ಬಿಬಿಎಂಪಿ ಹೇಳೋ ಟೈಮ್ ನಲ್ಲಿ, ಸೂಚಿಸೋ ಜಾಗದಲ್ಲೇ ಬೀದಿನಾಯಿಗಳಿಗೆ ಊಟ ಹಾಕಬಹುದಾಗಿದೆ.
ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಬೀದಿನಾಯಿಗಳ ಗುಂಪು ಓಡಾಡಿಕೊಂಡಿವೆ. ಇನ್ನು ಬೀದಿಗಳಲ್ಲಿ ಊಟ ಹಾಕುವಾಗ ನಾಯಿಗಳು ಗುಂಪು ಸೇರುತ್ತವೆ, ಈ ವೇಳೆ ಶ್ವಾನಗಳು ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಹೌ ಹಾರುತ್ತವೆ. ಇದಕ್ಕಾಗಿ ಊಟ ನೀಡೋದಕ್ಕೆ ಸಮಯ ಹಾಗೂ ಜಾಗ ನಿಗಧಿ ಮಾಡೋದಕ್ಕೆ ಪಾಲಿಕೆ ಮುಂದಾಗಿದೆ. ಪಾಲಿಕೆ ನಿಯಮ ಪ್ರಕಾರ ಬೆಳಗಿನ ಜಾವ 3 ರಿಂದ 4 ಗಂಟೆ ಅಥವಾ ರಾತ್ರಿ ಜನರ ಓಡಾಟ ಕಡಿಮೆ ಇದ್ದಾಗ ಮಾತ್ರ ಬೀದಿನಾಯಿಗಳಿಗೆ ಊಟ ಹಾಕುವಂತೆ ಪಾಲಿಕೆ ಸಲಹೆ ನೀಡಿದೆ.