Bank Loan: ಪತಿ ರೂ.770 ಕಂತು ಕಟ್ಟದ್ದಕ್ಕೆ ಪತ್ನಿಯನ್ನು ಒತ್ತೆ ಇರಿಸಿದ ಐಡಿಎಫ್‌ಸಿ ಬ್ಯಾಂಕ್‌ ಸಿಬ್ಬಂದಿ

Bank Loan: ಸಂಜೆ 6 ಗಂಟೆಯ ನಂತರ ಹಣ ಮರುಪಾವತಿಗೆ ಹಣಕಾಸು ಸಂಸ್ಥೆಗಳು ಒತ್ತಾಯ ಮಾಡುವಂತಿಲ್ಲ ಎಂಬ ನಿಯಮವಿದ್ದರೂ, ಇಲ್ಲೊಂದು ಕಡೆ ಪತಿ ಮಾಡಿದ್ದ ಸಾಲಕ್ಕೆ ಕಂತಿನ ಹಣ ಕಟ್ಟಿಲ್ಲವೆಂದು ಪತ್ನಿಯನ್ನು ಖಾಸಗಿ ಬ್ಯಾಂಕ್‌ ಸಿಬ್ಬಂದಿ ಒತ್ತೆ ಇಟ್ಟ ಘಟನೆಯೊಂದು ನಡೆದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Crime News Bangalore: ದೂರು ನೀಡಲು ಬಂದ ಮಹಿಳೆಯರಿಂದ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

ಪ್ರಶಾಂತ್‌ ಎಂಬುವವರು ವಳಪ್ಪಾಡಿಯಲ್ಲಿರುವ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ 35 ಸಾವಿರ ವೈಯಕ್ತಿಕ ಸಾಲ ಪಡೆದಿದ್ದರು. ಸಾಲದ ಕಂತು ಕಟ್ಟಲು ಇನ್ನೂ 10 ವಾರಗಳ ಅವಕಾವಿದ್ದರೂ, ಎ.30 ರಂದು ಮನೆಗೆ ಬಂದ ಮಹಿಳಾ ಸಿಬ್ಬಂದಿ ಪತ್ನಿ ಗೌರಿಶಂಕರಿಯನ್ನು ಕುಂಟುನೆಪ ಹೇಳಿ ಕರೆದೊಯ್ದಿದ್ದಾರೆ. ನಂತರ ಪ್ರಶಾಂತ್‌ ಸಾಲದ ಕಂತು ಕಟ್ಟುವವರೆಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Dakshina Kannada: ಚಾಲಕನ ನಿಯಂತ್ರಣ ತಪ್ಪಿದ ಕಾರು; ಹೋಟೆಲ್‌ಗೆ ಡಿಕ್ಕಿ, ಕಾರಿನಲ್ಲಿದ್ದ ದಂಪತಿಗೆ ಗಾಯ

ಪ್ರಶಾಂತ್‌ ಕೂಡಲೇ ಈ ವಿಷಯವನ್ನು ಪೊಲೀಸರಿಗೆ ಹೇಳಿ, ದೂರು ನೀಡಿದ್ದಾರೆ. ಕಂತಿನ ಹಣ 770 ರೂಪಾಯಿಯನ್ನು ಜಿಲ್ಲಾ ಉಪ ಎಸ್‌ಪಿಯ ಸಮ್ಮುಖದಲ್ಲಿ ಬ್ಯಾಂಕ್‌ಗೆ ಪಾವತಿ ಮಾಡಿ ಪತ್ನಿಯನ್ನು ಕರೆ ತಂದಿದ್ದಾರೆ.

Leave A Reply

Your email address will not be published.