Medical Negligence: ಗ್ಯಾಸ್ಟ್ರಿಕ್‌ ಎಂದು ಆಸ್ಪತ್ರೆಗೆ ಹೋದ ಯುವಕ ಸಾವು; ಕುಟುಂಬಸ್ಥರ ಆಕ್ರೋಶ

Share the Article

Medical Negligence: ಗ್ಯಾಸ್ಟ್ರಿಕ್‌ ಎಂದು ಆಸ್ಪತ್ರೆಗೆ ಹೋದ ಯುವಕನೋರ್ವ ವೈದ್ಯರ ನಿರ್ಲಕ್ಷ್ಯಕ್ಕೆ ಸಾವಿಗೀಡಾಗಿರುವ ಘಟನೆಯೊಂದು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಇದನ್ನೂ ಓದಿ: Shani God: ಈ ರಾಶಿಯವರಿಗೆ ಇನ್ನು ಮುಂದೆ ಫುಲ್ ಅದೃಷ್ಟವಂತರು! ಶನಿಯಿಂದ ಉತ್ತಮ ವರ ಸಿಗಲಿದೆ

ಗೋಪಾಲಪುರದ ನಿವಾಸಿ ನಯಾಜ್‌ (18) ಎಂಬಾತನೇ ಮೃತ ಯುವಕ.

ಗ್ಯಾಸ್ಟ್ರಿಕ್‌ನಿಂದ ಅನಾರೋಗ್ಯ ಉಂಟಾಗಿದ್ದು, ಹಾಗಾಗಿ ನಯಾಜ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಈತ ಮೃತ ಹೊಂದಿದ್ದ. ಇದೀಗ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದಲೇ ಯುವಕ ಮೃತ ಹೊಂದಿದ್ದಾನೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Menstrual Cycle: ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ಈ ಆಹಾರಗಳನ್ನು ಸೇವಿಸುವುದು ಒಳ್ಳೆಯದು : ಈ ಆಹಾರಗಳು ಹೆಚ್ಚು ಶಕ್ತಿ ನೀಡುತ್ತವೆ

ಆಸ್ಪತ್ರೆಯ ಮುಂದೆ ನಯಾಜ್‌ ಕುಟುಂಬಸ್ಥರು ದೌಡಾಯಿಸಿದ್ದು, ಸರಿಯಾದ ಚಿಕಿತ್ಸೆ ವೈದ್ಯಾಧಿಕಾರಿಗಳು ಕೊಡತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಿನ್ನೆ ಶುಕ್ರವಾರ ನಯಾಜ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದಾ ವೈದ್ಯಾಧಿಕಾರಿಗಳು ಇರಲಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತ ಹೊಂದಿದ್ದಾನೆ ನಯಾಜ್‌ ಎಂದು ಮನೆ ಮಂದಿ ಆರೋಪ ಮಾಡಿದ್ದಾರೆ. ಮಗನ ಸಾವಿಗೆ ನ್ಯಾಯ ಕೊಡಿ ಎಂದು ತಂದೆ ಅಂಗಲಾಚಿರುವ ಘಟನೆ ಕೂಡಾ ನಡೆದಿದೆ.

Leave A Reply

Your email address will not be published.