Menstrual Cycle: ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ಈ ಆಹಾರಗಳನ್ನು ಸೇವಿಸುವುದು ಒಳ್ಳೆಯದು : ಈ ಆಹಾರಗಳು ಹೆಚ್ಚು ಶಕ್ತಿ ನೀಡುತ್ತವೆ

Menstrual cycle: ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ಸರಿಯಾದ, ಪೋಷಕಾಂಶಯುಕ್ತ ಆಹಾರವನ್ನು ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ನೀವು ಸೇವಿಸುವ ಆಹಾರವು ನಿಮಗೆ ಶಕ್ತಿಯನ್ನು ನೀಡುತ್ತದೆ. ಅನವಶ್ಯಕ ಆಹಾರ ಸೇವನೆಯಿಂದಾಗಿ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಬರಬಹುದು. ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಲ್ಲಿ ಆಗುವ ಹಾರ್ಮೋನ್ ಬದಲಾವಣೆಗಳು ಅವರನ್ನು ಕೆರಳುವಂತೆ ಮಾಡುತ್ತವೆ. ಹಾಗೆಯೇ ಕೆಲವರು ಈ ಸಮಯದಲ್ಲಿ ಖಿನ್ನತೆ, ನೋವು, ಕೋಪ ಮತ್ತು ಆತಂಕವನ್ನು ಸಹ ಅನುಭವಿಸುತ್ತಾರೆ. ಕೆಲವರು ಸ್ನಾಯು ನೋವು, ಅಸ್ವಸ್ಥತೆ, ವಾಕರಿಕೆ ಇತ್ಯಾದಿಗಳನ್ನು ಅನುಭವಿಸುತ್ತಾರೆ.

ಇದನ್ನೂ ಓದಿ: Increasing milk yield in cows: ಹಸು ಹಾಲು ಕೊಡೋದನ್ನು ಕಡಿಮೆ ಮಾಡಿದ್ಯಾ ?! ಈ ಉಪಾಯ ಬಳಸಿದ್ರೆ ದಿನಕ್ಕೆ 3 ರಿಂದ 5 ಲೀಟರ್ ಹೆಚ್ಚಾಗುತ್ತೆ !!

ಸಾಮಾನ್ಯವಾಗಿ ಅನೇಕ ಮಹಿಳೆಯರು ಋತುಚಕ್ರದ ಮೊದಲ ಎರಡು ದಿನಗಳಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ದೀರ್ಘಾವಧಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪಿರಿಯಡ್ಸ್ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.

ಇದನ್ನೂ ಓದಿ: Menstrual Cycle: ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ಈ ಆಹಾರಗಳನ್ನು ಸೇವಿಸುವುದು ಒಳ್ಳೆಯದು : ಈ ಆಹಾರಗಳು ಹೆಚ್ಚು ಶಕ್ತಿ ನೀಡುತ್ತವೆ

ಋತುಚಕ್ರದ ಸಮಯದಲ್ಲಿ ನಿಮ್ಮನ್ನು ನಿಶ್ಯಕ್ತಿಯಿಂದ ದೂರವಿರಿಸಿ ಶಕ್ತಿಯನ್ನು ಪಡೆಯಲು ನಿಮಗೆ ಸಹಾಯ ಮಾಡುವ ಕೆಲವು ಆಹಾರಗಳು ಇಲ್ಲಿವೆ.

1. ಮುಟ್ಟಿನ ಸಮಯದಲ್ಲಿ ಕೆಫೈನ್ ಪದಾರ್ಥಗಳ ಸೇವನೆ ಒಳ್ಳೆಯದಲ್ಲ : ಮುಟ್ಟಿನ ಸಮಯದಲ್ಲಿ ನೀವು ಕೆಫೀನ್ ಹೊಂದಿರುವ ಆಹಾರವನ್ನು ಸಾಧ್ಯವಾದಷ್ಟು ತ್ಯಜಿಸಬೇಕು. ಕೆಫೀನ್ ಸೇವಿಸಿದರೆ, ಹೊಟ್ಟೆಯ ಆಮ್ಲಗಳು ನೋವನ್ನು ಹೆಚ್ಚಿಸಬಹುದು. ನೀವು ಕೆಫೈನ್ಗೆ ಅಡಿಕ್ಟ್ ಆಗಿದ್ದರೆ ಕಾಫಿಯ ಬದಲಿಗೆ ಚಹಾವನ್ನು ಕುಡಿಯಲು ಪ್ರಯತ್ನಿಸಿ. ಯಾವುದೇ ಸಮಯದಲ್ಲಿ ಚಹಾ ಒಳ್ಳೆಯದು.

2. ಹಣ್ಣುಗಳು ಮತ್ತು ತರಕಾರಿಗಳ ಸೇವನೆ : ಮುಟ್ಟಿನ ಅವಧಿಯಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು. ಕ್ಯಾರೆಟ್, ಏಪ್ರಿಕಾಟ್, ಕಿತ್ತಳೆ, ಪ್ಲಮ್ ಇತ್ಯಾದಿಗಳನ್ನು ತಿನ್ನಬಹುದು.

3. ನೀವು ಡಾರ್ಕ್ ಚಾಕೊಲೇಟ್ ತಿನ್ನಬಹುದು : ಪಿರಿಯಡ್ಸ್ ಸಮಯದಲ್ಲಿ ಡಾರ್ಕ್ ಚಾಕೊಲೇಟ್ ಸೇವನೆ ಉತ್ತಮ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಡಾರ್ಕ್‌ ಚಾಕೊಲೇಟ್ ಸಿರೊಟೋನಿನ್ ಅಂಶವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

4. ಕಾರ್ಬೋಹೈಡ್ರೇಟ್ ಆಹಾರಗಳನ್ನು ಹೆಚ್ಚಾಗಿ ಸೇವಿಸಿ : ಸಾಮಾನ್ಯವಾಗಿ ಪಿರಿಯಡ್ಸ್ ಸಮಯದಲ್ಲಿ ಆಗಾಗ್ಗೆ ರಕ್ತಸ್ರಾವವಾಗುತ್ತಿರುತ್ತದೆ. ಆದ್ದರಿಂದ ಕಾರ್ಬೋಹೈಡ್ರೆಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಕಾರ್ಬೋಹೈಡ್ರೆಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವು ರಕ್ತಹೀನತೆಯ ವಿರುದ್ಧ ಹೋರಾಡಲು ಮತ್ತು ಕಳೆದುಹೋದ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮ್ಮನ್ನು ಆಲಸ್ಯ ಮತ್ತು ಖಿನ್ನತೆಯ ಭಾವನೆಯಿಂದ ದೂರವಿರಿಸುತ್ತದೆ.

5. ಜೀವಸತ್ವಗಳನ್ನು ಒಳಗೊಂಡಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು : ಈ ಸಮಯದಲ್ಲಿ ಆಹಾರದಲ್ಲಿ ಜೀವಸತ್ವಗಳನ್ನು ಸೇರಿಸುವುದು ಬಹಳ ಮುಖ್ಯ. ವಿಟಮಿನ್ ಇ ಪಡೆಯಲು ಬಟರ್ ಸ್ಕ್ರಾಚ್ ಮತ್ತು ಮೊಟ್ಟೆಯ ಹಳದಿಗಳನ್ನು ಸೇವಿಸಿ. ವಿಟಮಿನ್ ‘ಇ’ ನಿಮ್ಮ PMS ರೋಗಲಕ್ಷಣಗಳನ್ನು ನಿವಾರಿಸುತ್ತದೆ. ವಿಟಮಿನ್ ಬಿ6 ದೇಹದಲ್ಲಿನ ವಾಯುವನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ನಿಮ್ಮ ಸಂತಾನೋತ್ಪತ್ತಿಗೆ ಸಹಕಾರಿಯಾಗಿದೆ.

ಕೆಲವು ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ಜಂಕ್ ಫುಡ್ ತಿನ್ನುತ್ತಾರೆ. ಆದರೆ ಈ ಜಂಕ್ ಫುಡ್ ಗಳು ದೇಹಕ್ಕೆ ಮಾರಕವಾಗಿ ಪರಿಣಮಿಸುತ್ತವೆ. ಪಿರಿಯಡ್ಸ್ ಸಮಯದಲ್ಲಿ ನಿಮ್ಮ ದೇಹಕ್ಕೆ ಚೈತನ್ಯ ನೀಡುವ ಆಹಾರಗಳನ್ನು ಸೇವಿಸುವುದು ಉತ್ತಮವಾಗಿರುತ್ತದೆ. ನಿಮ್ಮ ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಒಳಗೊಂಡಿರಬೇಕು. ಈ ಸಮಯದಲ್ಲಿ ಆಲ್ಕೋಹಾಲ್ ಮತ್ತು ತಂಪು ಪಾನೀಯಗಳನ್ನು ತ್ಯಜಿಸುವುದು ಉತ್ತಮ.

Leave A Reply

Your email address will not be published.