CM Siddaramaiah: ಮಲೆ ಮಹದೇಶ್ವರನಿಗೆ ಕಾಣಿಕೆಯಾಗಿ 700 ಕೆ.ಜಿ ಬೆಳ್ಳಿ ನೀಡಿದ ಸಿಎಂ ಸಿದ್ದರಾಮಯ್ಯ !!

CM Siddaramaiah: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು(CM Siddaramaiah) ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಲೆ ಮಹದೇಶ್ವರನಿಗೆ ಬರೋಬ್ಬರಿ 700ಕೆಜಿಯಷ್ಟು ಬೆಳ್ಳಿಯನ್ನು ದೇಣಿಗೆ ನೀಡಿದ್ದಾರೆ.

ಹೌದು, ಈ ಬಗ್ಗೆ ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್(H P Manjunath) ಮಾಹಿತಿ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲೆ ಮಹದೇಶ್ವರ ದೇವರಿಗೆ ಸುಮಾರು 700 ಕೆ.ಜಿ. ಬೆಳ್ಳಿಯನ್ನು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಅಂದಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಭೆ, ಸಮಾರಂಭಗಳಲ್ಲಿ ಬೆಳ್ಳಿ ಗದೆ, ಬೆಳ್ಳಿ ಕತ್ತಿ ಹೀಗೆ ಅನೇಕ ಉಡುಗೊರೆ ಬಂದವು. ಅದೆಲ್ಲವನ್ನೂ ಸೇರಿಸಿ ಒಟ್ಟು 700 ಕೆಜಿಯಂತೆ ದೇವರಿಗೆ ನೀಡಿದರು. ಆದರೆ ಇದಕ್ಕೆ ಸಿಎಂ ಅವರು ಯಾವುದೇ ಪ್ರಚಾರವನ್ನೂ ಪಡೆಯಲಿಲ್ಲ ಎಂದು ಹುಣಸೂರು ಮಾಜಿ ಶಾಸಕ ಹೆಚ್.ಪಿ. ಮಂಜುನಾಥ್ ಹೇಳಿದರು.

ಇದನ್ನೇ ಗುರಿಯಾಗಿಸಿಕೊಂಡು ಬಿಜೆಪಿ(BJP)ಯನ್ನು ತಿವಿದ ಅವರು ನಾವು ಸೀತಾರಾಮ ಅಂತ ನಮಸ್ಕಾರ ಮಾಡುತ್ತೇವೆ. ಬಿಜೆಪಿಯವರು ಜೈ ಶ್ರೀರಾಮ್ ಅಂತ ಕೂಗುತ್ತಾರೆ. ಯಾವ ರೀತಿ ಭಕ್ತಿ ಬೇಕು ಅಂತ ನಾವು ಡಿಸೈಡ್ ಮಾಡಬೇಕು ಎಂದು ಹೇಳಿದರು.

Leave A Reply

Your email address will not be published.