CM Siddaramaiah: ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸೀಟ್ ಗೆಲ್ಲದಿದ್ರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು

CM Siddaramaiah: ಲೋಕಸಭಾ ಚುನಾವಣೆಯಲ್ಲಿ(Parliament election-2024)ಕರ್ನಾಟಕದಲ್ಲಿ ಕಾಂಗ್ರೆಸ್‌ (Congress) ಹೆಚ್ಚಿನ ಸ್ಥಾನ ಗೆಲ್ಲದೇ ಇದ್ದರೆ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ (SR Srinivas) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬರದಿದ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ತುಮಕೂರು ಪ್ರಚಾರ ಸಭೆಯಲ್ಲಿ ಗುಬ್ಬಿ ಶಾಸಕ ಎಸ್‌.ಆರ್‌ ಶ್ರೀ‌ನಿವಾಸ್‌(MLA S.R. Srinivas) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Turtle Father: 800 ಮಕ್ಕಳ ತಂದೆ ಈ ಆಮೆ | ಇನ್ನೂ ಮುಗಿದಿಲ್ಲ ಈತನ ಆಸೆ!

ತುಮಕೂರು ಲೋಕಸಭಾ ಅಭ್ಯರ್ಥಿ ಮುದ್ದಹನುಮೇಗೌಡ ಪರ ಪ್ರಚಾರ ಮಾಡುವಾಗ ಸಭೆಯಲ್ಲಿ ಶ್ರೀನಿವಾಸ್ ಈ ಹೇಳಿಕೆ ನೀಡಿದ್ದಾರೆ. ಲೋಕಸಭೆಯಲ್ಲಿ(Loksabha) ಕಾಂಗ್ರೆಸ್(Congress) ಹೆಚ್ಚಿನ ಸೀಟ್ ಗೆಲ್ಲಲಿಲ್ಲ ಅಂದ್ರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಡಬೇಕಾಗುತ್ತೆ.

ಅಲ್ಲದೆ ಬಡವರ ಪರ ಕೆಲಸ ಮಾಡುವ ಸಿದ್ದರಾಮಯ್ಯರನ್ನು ಉಳಿಸಬೇಕು. ಎಲ್ಲರೂ ಸಿದ್ದರಾಮಯ್ಯರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಅವರು ಕರೆನೀಡಿದ್ದಾರೆ.

ಇದನ್ನೂ ಓದಿ: Elephant Attack: ದೇವರನ್ನು ಹೊತ್ತ ಆನೆ ಇನ್ನೊಂದು ಆನೆ ಜೊತೆ ಕಾದಾಟ

Leave A Reply

Your email address will not be published.