Kate Middleton: ಕೇಟ್ ಮಿಡಲ್ಟನ್‌ಗೆ ಕ್ಯಾನ್ಸರ್; ವೀಡಿಯೋ ಸಂದೇಶ ಇಲ್ಲಿದೆ
Kate Middleton: ರಾಜಕುಮಾರಿ ಕೇಟ್ ಮಿಡಲ್ಟನ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ (Cancer) ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಬಿಡುಗಡೆಯಾಗಿದೆ. ಹೌದು, ವೇಲ್ಸ್ ರಾಜಕುಮಾರಿ ಅವರಿಗೆ ಕಿಮೋಥೆರಪಿ (Chemotherapy) ಪ್ರಾರಂಭವಾಗಿದ್ದು, ಅವರು ಸಂದೇಶವೊಂದನ್ನು ಜನತೆಗೆ ನೀಡಿದ್ದಾರೆ. ಹಾಗೆನೇ ಯಾವ ಕ್ಯಾನ್ಸರ್ ಇದೆ ಎಂಬುವುದು ಇನ್ನೂ ತಿಳಿದು ಬಂದಿಲ್ಲ. ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: SSLC Exam: ಪರೀಕ್ಷಾ ಸಿಬ್ಬಂದಿಗೆ ಸಂಭಾವನೆ 5% ಹೆಚ್ಚಳ
https://twitter.com/i/status/1771235267837321694
ಗುಣವಾಗಲು ನಮಗೆ ಸ್ವಲ್ಪ ಸಮಯ, ಸ್ಥಳ ಮತ್ತು ಗೌಪ್ಯತೆಯ ಅಗತ್ಯವಿದೆ. ಹೊಟ್ಟೆ ಶಸ್ತ್ರಚಿಕಿತ್ಸೆ ಮಾಡಿದಾಗ ನನಗೆ ಕ್ಯಾನ್ಸರ್‌ನಂತಹ ಖಾಯಿಲೆ ಇದೆ ಎಂದು ಭಾವಿಸಿದ್ದೆವು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆದರೆ ಅನಂತರ ವೈದ್ಯರು ನನ್ನಲ್ಲಿ ಕ್ಯಾನ್ಸರ್ ಲಕ್ಷಣವಿದೆ ಎಂದು ಹೇಳಿದರು. ಈಗ ಕಿಮೊಥೆರಪಿ ಪ್ರಾರಂಭವಾಗಿದೆ ಎಂದು ವಿಡಿಯೋ ಸಂದೇಶದಲ್ಲಿ ರಾಜಕುಮಾರಿ ಹೇಳಿದ್ದಾರೆ.
ಬ್ರಿಟನ್ ರಾಜ ಚಾರ್ಲ್ಸ್ ವೇಲ್ಸ್ ರಾಜಕುಮಾರಿ ಕೇಟ್ ಬಗ್ಗೆ ಹೆಮ್ಮೆಪಡುವುದಾಗಿ ಬಕಿಂಗ್ಹ್ಯಾಮ್ ಅರಮನೆ ಹೇಳಿದೆ. ಏಕೆಂದರೆ ಕೇಟ್ ಚಿಕಿತ್ಸೆಯ ಬಗ್ಗೆ ಧೈರ್ಯದಿಂದ ಮಾತನಾಡಿದ್ದಾರೆ. ಈ ಕಷ್ಟದ ಸಮಯದಲ್ಲಿ ರಾಜ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಇಡೀ ಕುಟುಂಬದೊಂದಿಗೆ ಇದ್ದಾರೆ ಎಂದು ಅರಮನೆ ಹೇಳಿದೆ.
ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಕೂಡ ರಾಜಕುಮಾರಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಇಡೀ ದೇಶವು ನಿಮ್ಮೊಂದಿಗಿದೆ ಎಂದು ಹೇಳಿದ್ದು, ಎಲ್ಲಾ ದೇಶವಾಸಿಗಳು ನಿಮ್ಮನ್ನು ಪ್ರೀತಿಸುತ್ತಾರೆ ಎಂದು ಬರೆದಿದ್ದಾರೆ.