Praveen Maddadka: ‘ನೀಲಿ ಶಾಲು’ ಪೋಸ್ಟ್ ಮೂಲಕ ದಲಿತರ ನಿಂದನೆ: ಕಾವಂದನ ಭಕ್ತ ಆರೋಪಿ ಪ್ರವೀಣ್ ಮದ್ದಡ್ಕನ ವಿರುದ್ದ ಎಫ್.ಐ ಆರ್ !

ಸಾಮಾಜಿಕ ಜಾಲತಾಣದಲ್ಲಿ ದಲಿತ ಸಂಘಟನೆಗಳ ಕುರಿತು ಅವಹೇಳನಕಾರಿ ಬರಹ ಬರೆದ ಪ್ರವೀಣ್ ಮದ್ದಡ್ಕ ಎಂಬಾತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ನೀಲಿ ಶಾಲು ಹಾಕುವವರಿಗೆ ಬಿಟ್ಟಿ ಸಾರಾಯಿ ಕೊಟ್ರೆ….’ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣ ಆಗಿತ್ತು.

ಇದನ್ನೂ ಓದಿ: SSLC Exam: ಪರೀಕ್ಷಾ ಸಿಬ್ಬಂದಿಗೆ ಸಂಭಾವನೆ 5% ಹೆಚ್ಚಳ

‘ಆಪತ್ಬಾಂಧವ ‘ ಎಂಬ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಹೊಸಮಠ ನೇತೃತ್ವದ ತಂಡ ಠಾಣೆಗೆ ಭೇಟಿ ನೀಡಿ ದೂರು ನೀಡಿತ್ತು. ಅಲ್ಲದೆ ಆರೋಪಿಯ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ನೀಲಿ ಶಾಲು ಹಾಕುವವರಿಗೆ ಬಿಟ್ಟಿ ಸಾರಾಯಿ ಕೊಟ್ರೆ ತಾಯಿಯನ್ನೇ ಮಾರುತ್ತಾರೆ ಎನ್ನುತ್ತಾ ಸೌಜನ್ಯ ಹೋರಾಟದ ವಿರುದ್ಧ ಪ್ರವೀಣ್ ಮದ್ದಡ್ಕ ಎಂಬಾತ ಫೇಸ್ಬುಕ್ ನಲ್ಲಿ ಹಾಕಿದ್ದ. ಧರ್ಮಸ್ಥಳದ ಕಾವಂದರನ್ನು ಹೊಗಳುವ ಸಂದರ್ಭದಲ್ಲಿ ಕಾವಂದರ ಭಕ್ತ ಪ್ರವೀಣ್ ಮದ್ದಡ್ಕ ದಲಿತರ ಬಗ್ಗೆ ತೀರಾ ನಿಕೃಷ್ಟ ಮಾತಾಡಿದ್ದ.

ಇದನ್ನೂ ಓದಿ: CBI News: ರಾಷ್ಟ್ರಪತಿಯನ್ನು, ಪ್ರಧಾನ ಮಂತ್ರಿಯನ್ನು ಸಿಬಿಐ ಬಂಧಿಸಬಹುದಾ? ನಿಯಮಗಳು ಏನು ಹೇಳುತ್ತೆ ?!

‘ ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮರ್ಯಾದಿ ಕೆಟ್ಟ ನಿಯತ್ತು ಇಲ್ಲದ ಜನ ದಲಿತರು; ನೀಲಿ ಶಾಲ್ ಹಾಕಿದ ಜನಗಳಿಗೆ ಬಿಟ್ಟಿ ಎಣ್ಣೆ ಸಿಕ್ಕರೆ ತಾಯಿಯನ್ನೇ ಮಾರುತ್ತಾರೆ’ ಎಂದು ಬರೆಯಲಾಗಿದ್ದು ಸದ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಂಬೇಡ್ಕರ್ ಅವರ ನೀಲಿ ಶಾಲು ಹಾಗೂ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಾಕಾರಿ ಬರಹ ಬರೆದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದಾತನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಭೀಮ್ ಆರ್ಮಿ ಸಂಘಟನೆಯು ಪೊಲೀಸ್ ಠಾಣೆಗೆ ದೂರು ನೀಡಿತ್ತು.

ಈಗಾಗಲೇ ಭಾರೀ ಸುದ್ದಿಯಲ್ಲಿರುವ ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ, ಹಾಗೂ ಹೋರಾಟಗಾರರ ವಿರುದ್ಧ ಫೇಸ್ಬುಕ್ ನಲ್ಲಿ ಈ ಪೋಸ್ಟ್ ಬರೆಯಲಾಗಿತ್ತು. ಆ ಸಂದರ್ಭ ದಲಿತರನ್ನು ನೀಚವಾಗಿ ಅವಾಚ್ಯವಾಗಿ ನಿಂದನೆ ಮಾಡಲಾಗಿದೆ.

Leave A Reply

Your email address will not be published.