Marriage: ತಾಳಿ ಕಟ್ಟುವ ಶುಭ ಘಳಿಗೆಯಲ್ಲೇ ಮದುವೆ ಹಾಲ್‌ಗೆ ಎಂಟ್ರಿ ಕೊಟ್ಟ ಪ್ರಿಯತಮ!!! ತಾಳಿ ಕೈಯಲ್ಲಿ ಹಿಡಿದು, ನನಗೆ ವಂಚಿಸಿ ಮದುವೆ ಆಗ್ತೀಯಾ ಎಂದ ಲವ್ವರ್‌

Hassan: ತಾಳಿ ಕಟ್ಟುವ ಶುಭ ವೇಳೆಯಲ್ಲಿ ವಧುವಿನ ಪ್ರಿಯತಮ ಬಂದು ಪ್ರೀತಿ ವಿಷಯ ಹೇಳಿದ್ದು, ಮದುವೆ ಅರ್ಧದಲ್ಲೇ ಮುರಿದು ಬಿದ್ದ ಘಟನೆಯೊಂದು ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.

ಇದನ್ನೂ ಓದಿ: Bridge Collapse: ನಿರ್ಮಾಣ ಹಂತದ ಸೇತುವೆ ಕುಸಿತ : 1 ಸಾವು, 9 ಮಂದಿಗೆ ಗಂಭೀರ ಗಾಯ

ಬೇಲೂರಿನ ತೇಜಸ್ವಿನಿ ಹಾಗೂ ಶಿವಮೊಗ್ಗ ಮೂಲದ ಪ್ರಮೋದ್‌ ಕುಮಾರ್‌ ಮದುವೆ ಬೇಲೂರಿನ ಒಕ್ಕಲಿಗರ ಸಂಘದಲ್ಲಿ ಗುರುವಾರ ನಡೆಯಲಿತ್ತು. ಆದರೆ ತಾಳಿ ಕಟ್ಟಲು ಇನ್ನೇನು ಸಿದ್ಧತೆ ಆಗುತ್ತಿದ್ದಂತೆ ಯುವಕನೋರ್ವ ಕಲ್ಯಾಣ ಮಂಟಪಕ್ಕೆ ಬಂದು ಮದುವೆಗೆ ಅಡ್ಡಿ ಪಡಿಸಿದ್ದಾನೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಇದನ್ನೂ ಓದಿ: Lok Sabha Election 2024: ದಕ್ಷಿಣ ಕನ್ನಡದಲ್ಲಿ ಶಸ್ತ್ರಾಸ್ತ್ರಗಳ ಠೇವಣಿಗೆ ಪೊಲೀಸ್‌ ಆಯುಕ್ತರ ಆದೇಶ

ಲವ್ವರ್‌ ನವೀನ್‌ ಎಂಬಾತ ತಾಳಿ ಕಿತ್ತುಕೊಂಡು ತೇಜಸ್ವಿನಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆಗೇ ಮದುವೆ ಮಾಡಬೇಕು ಎಂದು ಹಠ ಮಾಡಿದ್ದಾನೆ. ಇದರಿಂದ ಕೆಲಕಾಲ ಅಲ್ಲಿ ಗೊಂದಲ ನಿರ್ಮಾಣವಾಯಿತು. ನಂತರ ಪೊಲೀಸರು ಬಂದು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ತೇಜಸ್ವಿನಿ ಹಾಗೂ ನವೀನ್‌ ಪರಸ್ಪರ ಲವ್‌ ಮಾಡುತ್ತಿದ್ದರು. ಆದರೆ ಯುವತಿ ತನ್ನ ಪ್ರೀತಿ ವಿಚಾರ ಮುಚ್ಚಿಟ್ಟು ಪ್ರಮೋದ್‌ ಕುಮಾರ್‌ ಜೊತೆ ಮದುವೆಗೆ ಮುಂದಾಗಿದ್ದಾಳೆ. ಇದರಿಂದ ವಂಚನೆಗೊಳಗಾದ ಯುವಕ ತನ್ನ ಪ್ರೀತಿ ವಿಷಯ ಮದುವೆ ಸಂದರ್ಭದಲ್ಲಿ ಬಂದು ಎಲ್ಲರೆದುರು ಹೇಳಿದ್ದಾನೆ.

ಈ ಪ್ರೀತಿ ವಿಷಯ ತಿಳಿದ ಮದುಮಗ ನನಗೆ ಈ ಮದುವೆಯೇ ಬೇಡ ಎಂದು ಮದುವೆ ಮಂಟಪದಿಂದ ಹೊರ ಹೋಗಿದ್ದಾನೆ. ಇತ್ತ ವಧು ಮತ್ತು ವರನ ಸಂಬಂಧಿಕರು ಬೇಲೂರು ಪೊಲೀಸ್‌ ಠಾಣೆಯಲ್ಲಿ ಸೇರಿದ್ದರು.

Leave A Reply

Your email address will not be published.