Home Crime Crime News: ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಸಲೂನ್ ಮಾಲಿಕ : ಪೊಲೀಸ್ ಎನ್ಕೌಂಟರ್ನಲ್ಲಿ...

Crime News: ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಸಲೂನ್ ಮಾಲಿಕ : ಪೊಲೀಸ್ ಎನ್ಕೌಂಟರ್ನಲ್ಲಿ ಸಾವು

Crime News

Hindu neighbor gifts plot of land

Hindu neighbour gifts land to Muslim journalist

ಉತ್ತರ ಪ್ರದೇಶದ ಬದೌನ್ ನಲ್ಲಿ ಸಲೂನ್ ಮಾಲಿಕ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಮಕ್ಕಳನ್ನು ಕೊಂದು ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ್ದ, ಈ ಸಂಬಂಧ ಪೊಲೀಸರು ದೂರು ದಾಖಲಿಸಿ ಅಪರಾಧಿಯ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಮಂಗಳವಾರ ರಾತ್ರಿ ಸಲೂನ್ ಮಾಲೀಕ ಪೊಲೀಸರ ಎನ್ಕೌಂಟರ್ನಲ್ಲಿ ಹತ್ಯೆಗೀಡಾಗಿದ್ದಾನೆ.

ಇದನ್ನೂ ಓದಿ: Javed Akhtar: ಮುಸ್ಲಿಂರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು- ಖ್ಯಾತ ಸಾಹಿತಿ ಜಾವೇದ್‌ ಅಖ್ತರ್‌ ನುಡಿ

ಮಂಡಿ ಸಮಿತಿ ಪೊಲೀಸ್ ಠಾಣೆಯ ಅಡಿಯಲ್ಲಿರುವ ಬಾಬಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ತನ್ನ ನೆರೆಮನೆಯವರ ಮನೆಗೆ ನುಗ್ಗಿ 11 ಮತ್ತು 6 ವರ್ಷದ ಇಬ್ಬರು ಸಹೋದರರ ಗಂಟಲು ಸೀಳಿ ಹತ್ಯೆ ಮಾಡಿದ್ದು, ಮೂರನೇ ಹುಡುಗನಿಗೆ ಗಂಭೀರವಾಗಿ ಗಾಯಗೊಳಿಸಿದ್ದಾನೆ .

ಇದನ್ನೂ ಓದಿ: Viral Video: ಅಸಹ್ಯ! ನಡುರಸ್ತೆಯಲ್ಲಿಯೇ ಹಸ್ತಮೈಥುನ ಮಾಡಿ ವೀರ್ಯವನ್ನು ಮಾರಾಟದ ಐಸ್‌ಕ್ರೀಂಗೆ ಬೆರೆಸಿದ

ಆರೋಪಿಯನ್ನು ಸಾಜಿದ್ ( 22 ) ಎಂದು ಗುರುತಿಸಲಾಗಿದೆ. ಈತ ಇಬ್ಬರು ಮಕ್ಕಳನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದ. ಆದಾಗ್ಯೂ , ಯುಪಿ ಪೊಲೀಸರು ಶೋಧವನ್ನು ಪ್ರಾರಂಭಿಸಿದ್ದು ಈ ವೇಳೆ ಸಾಜಿದ್ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ. ಸ್ಥಳೀಯರ ಪ್ರಕಾರ , ಆರೋಪಿ ತನ್ನ ನೆರೆಹೊರೆಯವರಾದ ಸಲೂನ್ ನಡೆಸುತ್ತಿರುವ ವಿನೋದ್ ಕುಮಾರ್ ಅವರ ಕುಟುಂಬದೊಂದಿಗೆ ಆಗಾಗ್ಗೆ ವಿವಾದಗಳನ್ನು ಹೊಂದಿದ್ದ ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರೂ ಆದರೆ ಈ ವೇಳೆ ಆಕ್ರೋಶಗೊಂಡ ಸ್ಥಳೀಯರು ಶವಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡದೆ, ಶವಗಳನ್ನು ತೆಗೆದುಕೊಳ್ಳಲು ಬಂದ ಆಂಬ್ಯುಲೆನ್ಸ್ ಅನ್ನು ವಾಪಸ್ ಕಳುಹಿಸಿದ್ದಾರೆ.