Pitbull Dog: ಪಿಟ್‌ಬುಲ್‌, ಬುಲ್‌ಡಾಗ್‌, ಅರ್ಜೆಂಟಿನೋ ತಳಿ ಸೇರಿ ಒಟ್ಟು ಸೇರಿ 20 ಕ್ಕೂ ಅಧಿಕ ತಳಿಗೆ ನಿಷೇಧಕ್ಕೆ ಶಿಫಾರಸು ಮಾಡಿದ ಕೇಂದ್ರ ಸರಕಾರ

ದೇಶಾದ್ಯಂತ ನಾಯಿಗಳಿಂದ ಜನರ ಮೇಲೆ ದಾಳಿ ಹಾಗೂ ವಿದೇಶಿ ತಳಿಗಳ ಅಕ್ರಮ ವ್ಯಾಪಾರ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಪಿಟ್‌ಬುಲ್‌ ಟೆರಿಯರ್‌, ಅಮೆರಿಕನ್‌ ಬುಲ್‌ಡಾಗ್‌, ಕಂಗಾಲ್‌, ರಷ್ಯನ್‌ ಶೆಫರ್ಡ್‌ ಸೇರಿ 23 ಬಗೆಯ ಅಪಾಯಕಾರಿ ವಿದೇಶಿ ಶ್ವಾನ ತಳಿಗಳನ್ನು ಕೇಂದ್ರ ಸರಕಾರ ಬುಧವಾರ ನಿಷೇಧಕ್ಕೆ ಶಿಫಾರಸು ಮಾಡಿದೆ.

ಇದನ್ನೂ ಓದಿ: AI Software Engineer: ವಿಶ್ವದ ಮೊದಲ ‘ಎಐ’ ಎಂಜಿನಿಯರ್ ಬಿಡುಗಡೆ, ಈತನ ಹೆಸರು ಡೆವಿನ್!

23 ತಳಿಯ ಶ್ವಾನಗಳ ಮಾರಾಟ, ಸಂತಾನೋತ್ಪತ್ತಿಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಲಾಗಿದ್ದು, ಅಪಾಯಕಾರಿ ತಳಿಯ ನಾಯಿಗಳ ಸಾಕಣೆಯ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಸೂಚಿಸಲಾಗಿದೆ. ಜತೆಗೆ ಅಪಾಯಕಾರಿ ತಳಿಯ ಶ್ವಾಸನಗಳ ಆಮದಿನ ಮೇಲೂ ನಿರ್ಬಂಧ ಹೇರಲು ಮುಂದಾಗಿದೆ.

ಇದನ್ನೂ ಓದಿ: CAA Rules: ಸಿಎಎ ವಿರುದ್ಧ ವಿಶ್ವಸಂಸ್ಥೆ ಅಪಸ್ವರ

ಕೇಂದ್ರ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವಾಲಯ ಜಂಟಿ ಕಾರ್ಯದರ್ಶಿ ಡಾ. ಬಿ.ಪಿ. ಚೌಧರಿ ಅವರು, ”ದೇಶದಲ್ಲಿ ಹೆಚ್ಚುತ್ತಿರುವ ನಾಇ ಕಡಿತ ಪ್ರಕರಣ, ಕೆಲವೊಂದು ಶ್ವಾನ ತಳಿಗಳ ಅಪಾಯಕಾರಿ ವರ್ತನೆ ಬಗ್ಗೆ ಸಾರ್ವಜನಿಕರಿಂದ ದೂರು ಹಾಗೂ ಪೆಟಾ ಮನವಿಯಂತೆ ಮನುಷ್ಯರ ಜೀವಕ್ಕೆ ಕಂಟಕವೆನಿಸಿದ ಶ್ವಾನ ತಳಿಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದರು.

ಪಿಟ್‌ಬುಲ್‌ ಟೆರಿಯರ್‌, ಟೋಸಾ ಇನು, ಅಮೆರಿಕನ್ ಸ್ಟಾಫರ್ಡ್ ಶೈರ್ ಟೆರಿಯರ್‌, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೊ, ಅಮೆರಿಕನ್ ಬುಲ್‌ ಡಾಗ್, ಬೋರ್ ಬೋಯಲ್, ಕಂಗಾಲ್, ರಷ್ಯನ್ ಶೆಫರ್ಡ್, ಟೊರ್ನ್ ಜಾಕ್, ಸರ್ಪ್ ಲಾನಿನಾಕ್‌, ಜಪಾನೀಸ್‌ ಟೋಸಾ ಮತ್ತು ಅಕಿಟಾ, ಮಾಸ್ಟಿಕ್ಸ್, ರಾಟ್ ವೀಲರ್, ಟೆರಿಯರ್‌ಗಳು ರಿಡ್ಜ್ ಬ್ಯಾಕ್, ವೂಲ್ಫ್ ಡಾಗ್ಸ್, ಕೆನರಿಯೊ, ಅಕ್ಷಾಶ್, ಮಾಸ್ಕೊ ಗಾರ್ಡ್, ಕೇನ್ ಕೊರ್ಸೊ ಶ್ವಾನ ತಳಿಗಳನ್ನು ನಿಷೇಧಿಸಲಾಗಿದೆ.

Leave A Reply

Your email address will not be published.