Bengaluru: ನೃತ್ಯದ ವೇಳೆ ಮೈತಾಕಿದ ವಿಚಾರಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಗೈದಿದ್ದ ನಾಲ್ವರ ಸೆರೆ
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದೀಗ ಶಿವರಾತ್ರಿ ಹಬ್ಬದ ಪ್ರಯುಕ್ತ ನೃತ್ಯ ಮಾಡುವ ವಿಚಾರಕ್ಕೆ ನಡೆದಿದ್ದ ಯುವಕನ ಈ ಕೊಲೆ ಪ್ರಕರಣ ಸಂಬಂಧ ಇದೀಗ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಗಿರಿನಗರದ ನಿವಾಸಿಗಳಾದ ಚೇತನ್, ರಂಗ, ಪವನ್ ಹಾಗೂ ಅಪ್ರಾಪ್ತ ಶಿವರಾತ್ರಿಯಂದು ರಾತ್ರಿ ಶ್ರೀನಗರ ನಿವಾಸಿ ಯೋಗೇಶ್ ಕುಮಾರ್ (23) ಎಂಬ ಯುವಕನಿಗೆ ಚಾಕುವಿನಿಂದ ಬರ್ಬರವಾಗಿ ಇರಿದು ಆರೋಪಿಗಳು ಹತ್ಯೆಗೈದಿದ್ದರು.
ಇದನ್ನು ಓದಿ: Putturu: ವಿವೇಕಾನಂದ ಪಾಲಿಟೆಕ್ನಿಕ್‌ನ ನಿವೃತ್ತ ಪ್ರಾಂಶುಪಾಲರಾದ ಇಂಜಿನಿಯರ್ ಗೋಪಿನಾಥ್ ಶೆಟ್ಟಿ ನಿಧನ
ಮೃತಪಟ್ಟ ಯುವಕ ಯೋಗೇಶ್ ಮಂಡ್ಯ ಜಿಲ್ಲೆ ಕೊಪ್ಪದ ವನಾಗಿದ್ದು, ನಗರದಲ್ಲಿ ವಾಹನ ಸರ್ವೀಸ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡು ಶ್ರೀನಗರದಲ್ಲಿ ನೆಲೆಸಿದ್ದ ಎಂದು ತಿಳಿದುಬಂದಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ದೇವಾಲಯಕ್ಕೆ ರಾತ್ರಿ 1.30ರ ಸುಮಾರಿಗೆ ಆತ ತೆರಳಿದ್ದ.
ಇದೇ ವೇಳೆ ಉತ್ಸವದಲ್ಲಿ ತಮಟೆ ಶಬ್ದಕ್ಕೆ ನೃತ್ಯ ಮಾಡುವಾಗ ಯೋಗೇಶ್ ಹಾಗೂ ಆರೋಪಿಗಳ ನಡುವೆ ಮೈ ತಾಕಿಸಿದ್ದನೆಂಬ ವಿಚಾರಕ್ಕೆ ಜಗಳ ಆರಂಭವಾಗಿದ್ದು, ಆರೋಪಿಗಳು, ಯೋಗೇಶ್‌ಗೆ ಚಾಕುವಿ ನಿಂದ ಇರಿದು ಪರಾರಿ ಆಗಿದ್ದರು. ಆರೋಪಿಗಳ ಫೋನ್ ಕಾಲ್ ಟ್ರ್ಯಾಕ್ ಮಾಡುವ ಮೂಲಕ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.