Putturu: ವಿವೇಕಾನಂದ ಪಾಲಿಟೆಕ್ನಿಕ್‌ನ ನಿವೃತ್ತ ಪ್ರಾಂಶುಪಾಲರಾದ ಇಂಜಿನಿಯರ್ ಗೋಪಿನಾಥ್‌ ಶೆಟ್ಟಿ ನಿಧನ‌

Putturru: ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‌ನ ನಿವೃತ್ತ ಪ್ರಾಂಶುಪಾಲರಾದ ಇಂಜಿನಿಯರ್‌ ಗೋಪಿನಾಥ್‌ ಶೆಟ್ಟಿ (60) ಅವರು ದಿಢೀರ್‌ ಅಸ್ವಸ್ಥಗೊಂಡು ನಿಧನ ಹೊಂದಿದ ಘಟನೆ ನಡೆದಿದೆ. ಮಾ.13 (ಇಂದು) ರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ನಂತರ ಕೆಲವೇ ಕ್ಷಣಗಳಲ್ಲಿ ನಿಧನ ಹೊಂದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Dharmasthala: ಶಿವರಾತ್ರಿ ಬೆನ್ನಲ್ಲೇ ಧರ್ಮಸ್ಥಳ ಭಕ್ತರಿಗೆ ವಿಶೇಷ ಮಾಹಿತಿ !!

ಹೃದಯಾಘಾತದಿಂದ ಮೃತ ಹೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: Parliament election : ದಕ್ಷಿಣ ಕನ್ನಡದಲ್ಲಿ ಅಚ್ಚರಿ ಮೂಡಿಸಿದ ಸಮೀಕ್ಷಾ ವರದಿ – ಜನ ಬೆಂಬಲ ಬಿಜೆಪಿಗೋ ಇಲ್ಲ ಪುತ್ತಿಲ ಪರಿವಾರಕ್ಕೋ?

ವಿವೇಕಾನಂದ ಪಾಲಿಟೆಕ್ನಿಕ್‌ನ ಆಧಾರ ಸ್ಥಂಭವಾಗಿದ್ದ ಇವರು ಉತ್ತಮ ಶಿಕ್ಷಣ ಸಂಸ್ಥೆಯಾಗಿ ರೂಪಿಸುವಲ್ಲಿ ಗೋಪಿನಾಥ್‌ ಶೆಟ್ಟಿಯವರ ಪಾತ್ರ ದೊಡ್ಡದು. ಇವರು ಇಂಜಿನಿಯರ್‌ ಆಗಿದ್ದು, ವಿವೇಕಾನಂದ ವಿದ್ಯಾಸಂಸ್ಥೆ ಸೇರಿ ಹಲವು ಕಟ್ಟಡಗಳಿಗೆ ಇಂಜಿನಿಯರ್‌ ಪ್ಲ್ಯಾನ್‌ ಮಾಡಿದ್ದಾರೆ. ಇವರು ಕಳೆದೊಂದು ವರ್ಷದಿಂದ ಪುತ್ತೂರಿನ ಬಿ-ಫಾರ್ಮಾ ಕಾಲೇಜ್‌ ಆದ ವಿವೇಕಾನಂದ ಇನ್‌ಸ್ಟಿಟ್ಯೂಟ್‌ ಆಫ್‌ ಫಾರ್ಮಸ್ಯೂಟಿಕಲ್‌ ಸೈನ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಶಿಷ್ಯವರ್ಗ, ಬಂಧು ಮಿತ್ರರನ್ನು ಅಗಲಿದ್ದಾರೆ.

Leave A Reply

Your email address will not be published.