Andhra Pradesh: ಜಮೀನು ವಿವಾದ; ಪೋಷಕರಿಗೆ ಮನಬಂದಂತೆ ಥಳಿಸಿದ ಮಗ

Share the Article

ತಾಯಿಯೊಬ್ಬಾಕೆಯನ್ನು ಮಗನೋರ್ವ ಆಸ್ತಿಗಾಗಿ ಮನಬಂದಂತೆ ಥಳಿಸಿರುವ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಮಗನ ವರ್ತನೆ ಯಾವುದೇ ಒಂದು ಮೃಗಕ್ಕಿಂತ ಕಮ್ಮಿಯಿರಲಿಲ್ಲ. ತಾಯಿಯನ್ನು ನೆಲಕ್ಕೆ ತಳ್ಳಿ, ಬೀಳಿಸಿ, ನಂತರ ತಂದೆಗೂ ಕಪಾಳಕ್ಕೆ ಬಾರಿಸಿದ್ದು, ಯಾರೇ ಮುಂದೆ ಬಂದು ಈ ಘಟನೆಯನ್ನು ತಡೆಯೋ ಪ್ರಯತ್ನ ಮಾಡಲಿಲ್ಲ.

ಇದನ್ನೂ ಓದಿ: Himachal Pradesh: ಬಿಎಸ್‌ಎಫ್‌ನ ಮೊದಲ ಮಹಿಳಾ ಸ್ನೈಪರ್ ಸುಮನ್ ಕುಮಾರಿ : ಇತಿಹಾಸ ನಿರ್ಮಿಸಿದ ಮಹಿಳಾ ಸಾಧಕಿ

ಶ್ರೀನಿವಾಸುಲು ರೆಡ್ಡಿ ಎಂಬಾತನೇ ತನ್ನ ತಂದೆ ತಾಯಿಗೆ ಮನಬಂದಂತೆ ಥಳಿಸಿದವನು. ಇದೀಗ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ತನ್ನ ಹೆತ್ತವರು ತನ್ನ ಅಣ್ಣನಿಗೆ ಭೂಮಿಯನ್ನು ನೀಡಿದ್ದರಿಂದ ಈತ ಕೋಪಗೊಂಡಿದ್ದು, ನಿರ್ಧಾರವನ್ನು ಬದಲಾಯಿಸಲು ಪದೇ ಪದೇ ಒತ್ತಾಯ ಮಾಡುತ್ತಿದ್ದ.

ತಂದೆ ತಾಯಿ ಜೊತೆ ಅನುಚಿತ ವರ್ತನೆ ಮಾಡಿದವರಿಗೆ ಶಿಕ್ಷೆಯಾಗಲಿದೆ. ಇಂತಹ ದೌರ್ಜನ್ಯದ ಕುರಿತು ಪೋಷಕರು ದೂರು ದಾಖಲಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.

Leave A Reply

Your email address will not be published.