Matrimony: ಮ್ಯಾಟ್ರಿಮೊನಿಯಲ್ಲಿ ಯುವಕನ ಫೋಟೋ ಹಾಕಿ 250 ಮಹಿಳೆಯರಿಗೆ ವಂಚಿಸಿದ ವಯಸ್ಕ

ಇತ್ತೀಚೆಗೆ ಮ್ಯಾಟ್ರಿಮೊನಿಯಲ್ಲೂ ವಂಚನೆ ಶುರುವಾಗಿದೆ. ಅಂಕಲ್ ಒಬ್ಬನು 25 ವರ್ಷದ ಯುವಕನ ಫೋಟೋವನ್ನು ಹಾಕಿ ಏರ್ಪೋರ್ಟ್ ನ ಕಸ್ಟಮ್ ಆಧಿಕಾರಿ ಎಂದು ಹೇಳಿಕೊಂಡು ಅವನು ಸುಮಾರು 250 ಮಹಿಳೆಯರಿಗೆ ವಂಚನೆಯನ್ನು ಮಾಡಿದ್ದಾನೆ.

ಇದನ್ನೂ ಓದಿ: Actress Nayanatara: ಕೋಟಿ ಕೋಟಿ ಹಣ ಕೊಟ್ಟರೂ ಆ ನಟನ ಜೊತೆ ನಟಿಸಲ್ಲ- ನಯನತಾರಾ

ಬೆಂಗಳೂರು: ಸಾಮಾನ್ಯವಾಗಿ ಇವತ್ತಿನ ಕಾಲದಲ್ಲಿ ಮ್ಯಾಟ್ರಿಮೊನಿ ಯಲ್ಲಿ ಹುಡುಗ ಹುಡುಗಿಯರನ್ನು ಹುಡುಕುವುದು ಸಹಜ. ಆದರೆ ತನ್ನದೇ 25 ವರ್ಷದ ಫೋಟೋವನ್ನು ಹಾಕಿ ಮಹಿಳೆಯರಿಗೆ ಅಂಕಲ್ ಒಬ್ಬ ಮೋಸ ಮಾಡಿರುವುದು ತಿಳಿದು ಬಂದಿದೆ.

ನಾವು ಆನ್ಲೈನ್ ಮೂಲಕ ಹುಡುಗ ಹುಡುಗಿಯರನ್ನು ನೋಡುವುದು ಅಷ್ಟು ಒಳ್ಳೆಯದಲ್ಲ. ಕೆಲ ಬಾರಿ ನಮಗೆ ಮೋಸ ಆಗಬಹುದು. ಶೀಲ ಕಳೆದುಕೊಳ್ಳಬಹುದು. ಕಣ್ಣಾರೆ ಕಂಡವರನ್ನು ನಂಬಲು ಕಷ್ಟವಾದ ಕಾಲವಿದು. ಈ ವೆಬ್ ಸೈಟ್ ನ ಆಶಯ ಒಳ್ಳೆಯಾದೇ ಆದರೂ ಇದರಿಂದ ಸಮಸ್ಯೆಗಳು ಬೆಟ್ಟದಷ್ಟಿದೆ.

ನಕಲಿ ಖಾತೆಯನ್ನು ಮಾಡಿಕೊಂಡು ಸಮಾರು 250 ಮಹಿಳೆಯರಿಗೆ ಆಟ ಆಡಿಸಿದ್ದ ಆರೋಪಿ ಬೆಂಗಳೂರಿನ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇವನು ಮುಖ್ಯವಾಗಿ ವಿಧವೆಯರು ಹಾಗೂ ವಿಚ್ವೇದಿತ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡಿದ್ದ. ನರೇಶ್ ಪುರಿ ಗೋಸ್ವಾಮಿ ಯು ಆರೋಪಿಯಾಗಿದ್ದಾನೆ.

ಇವನು ಎರಡು ಸಿಮ್ ಗಳನ್ನು ಬಳಕೆ ಮಾಡುತ್ತಿದ್ದನು. ಹಿಂದಿ ಪತ್ರಿಕೆಯಲ್ಲಿ ಬರುವ ವಧು ವರರ ಮೊಬೈಲ್ ನಂಬರ್ ಗಳಿಗೆ ಫೋನ್ ಮಾಡುತ್ತಿದ್ದನು. ಅಗರ್ ಸೇನಾಜಿ ವೈವಾಹಿಕ ಮಂಚ್ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಇವನು ಸಕ್ರಿಯವಾಗಿದ್ದನು. ಕೊಯಮತ್ತೂರು ಸ್ಥಳದ ಮಹಿಳೆಯೊಬ್ಬರನ್ನು ಬೆಂಗಳೂರಿಗೆ ಕರೆದುಕೊಂಡು ಪರ್ಸ್ ಬಿಟ್ಟು ಬಂದಿರುವುದಾಗಿ ಹೇಳಿ ಹಣವನ್ನು ದೋಚಿದ್ದನು.

ಇವನು ಮೊದಲು ಅವರೊಂದಿಗೆ ಉತ್ತಮ ಮಾತುಗಳನ್ನಾಡಿ ನಂತರ ಅವರನ್ನು ಮದುವೆಯಾಗುವುದಾಗಿ ಹೇಳಿ ವಂಚನೆ ಮಾಡುತ್ತಿದ್ದನು. ಆ ಪೈಕಿ ರಾಜಸ್ಥಾನದ 56, ಉತ್ತರ ಪ್ರದೇಶದ 32, ದೆಹಲಿಯ 32, ಕರ್ನಾಟಕದ 17, ಮಧ್ಯಪ್ರದೇಶದ 16, ಮಹಾರಾಷ್ರ ದ 13, ಗುಜರಾತ್ 11 ಮಹಿಳೆಯರಿಗೆ ವಂಚನೆ ಮಾಡಿದ್ದಾನೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.