

ಹೈದರಾಬಾದ್: ಅನುಪಮ್ಮ ಇದೆ ಮೊದಲ ಬಾರಿಗೆ ಬೋಲ್ಡ್ ಪಾತ್ರದಲ್ಲಿ ನಟನೆಯನ್ನು ಮಾಡುತ್ತಿದ್ದಾರೆ. ಇಷ್ಟು ದಿನಗಳವರೆಗೆ ಸಾಂಪ್ರದಾಯಕ ಪಾತ್ರದಲ್ಲಿ ನಟಿಸುತ್ತಿದ್ದ ಬಹು ಭಾಷಾ ನಟಿ ಅನುಪಮ್ಮನ ಹೊಸ ಪಾತ್ರದಲ್ಲಿ ನಟಿಸುತ್ತಿರುವ ಸಂಗತಿಯು ಅಭಿಮಾನಿಗಳಲ್ಲಿ ಬೇಸರ ತಂದಿದೆ. ಟಾಲಿವುಡ್‌ನಲ್ಲಿ ಟಿಲ್ಲು ಸ್ಟೋರ್ ಸಿನಿಮಾದ ಟ್ರೈಲರ್ ತೆರೆ ಕಂಡಾಗಿನಿಂದ ಅನುಪಮಾ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಾರೆ.
ಅನುಪಮ್ಮ ನವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಗೆ ಖಡ್ಗಮೃಗ ಮರಿಯ ಫೋಟೋವನ್ನು ಹಾಕಿ, ಖಡ್ಗಮೃಗವನ್ನು ಉಡುಗೊರೆಯಾಗಿ ನೀಡಿದರೆ, ನಾನು ನಿಮ್ಮವಳೆ ಎಂದು ಬರೆದುಕೊಂಡಿದ್ದಾರೆ. ಹಾಸ್ಯಕ್ಕಾಗಿ ಉಡುಗೊರೆ ನೀಡಿದವರು ಜೊತೆಗೆ ಡೇಟಿಂಗ್ ಮತ್ತು ಮದುವೆಯಾಗುವುದಾಗಿ ಹೇಲಿದ್ದಾರೆ. ಅವರ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಹೇಳುವ ಮುಖೇನ ಬಂಪರ್ ಆಫರ್ ಅನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ.
ಅನುಪಮಾ ಅವರ ಮೊದಲ ಚಿತ್ರವೇ ಯಶಸ್ಸು ಕಂಡಿತು. ಆದರೆ ಆದರ ನಂತರ ಅವರ ಸಿನಿ ಬದುಕಿನಲ್ಲಿ ಯಶಸ್ಸು ಕಾಣಲಿಲ್ಲ. ಪ್ರೇಮಂ ಚಿತ್ರದಲ್ಲಿ ಅನುಮಪಮಾ ಅವರ ಹೆಸರು ಮುನ್ನೆಲೆಗೆ ಬಂದಿದ್ದು. ಇವರು ತೆಲುಗು ತಮಿಳು ಮಲಯಾಳಂ ಸಿನಿಮಾದಲ್ಲಿ ಹಾಗೂ ಪುನೀತ್ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲಿ ಕನ್ನಡ ಚಿತ್ರ ರಂಗಕ್ಕೂ ಪರಿಚಯವಾದರು.
ಸಾಕಷ್ಟು ಸಿನಿಮಾದಲ್ಲಿ ಅನುಪಮಾ ಸಾಫ್ಟ್ ಕ್ಯಾರೆಕ್ಟರ್ ಆಗಿ ನಟನೆ ಮಾಡಿದ್ದಾರೆ. ಆದ್ರೆ ಈ ಬಾರಿ ಬೋಲ್ಡ್ ಪಾತ್ರದಲ್ಲಿ ನಟನೆ ಮಾಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಸಿನಿಮಾದಲ್ಲಿ ಸೆಕ್ಸ್ ಡೈಲಾಗ್ ಗಳು ಲಿಪ್ ಲಾಕ್ ದೃಶ್ಯ, ಸೇರಿದಂತೆ ಹೊಸ ಪ್ರಯತ್ನ ಮಾಡಿ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಅನುಪಮಾ ತನ್ನ ಬ್ಯೂಟಿ ಇಂದಲೇ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಇಂದು ಅನುಪಮಾ ನಟನೆಯ ಹಾಗೂ ಮಲಿಕ್ ರಾಮ್ ನಿರ್ದೇಶನ ಟಿಲ್ಲು ಸ್ಟೋರ್ ಸಿನಿಮಾ ಬಿಡುಗಡೆಗೆಯಾಗುತ್ತಿದೆ. ಅನುಪಮಾ ಮತ್ತು ಜಯಂ ನಟನೆಯ ಸೈರನ್ ಚಿತ್ರ ಬಿಡುಗಡೆ ಸಿದ್ದವಾಗಿದೆ












