Kukke Subrahmanya Temple: ರಸ್ತೆಬದಿಗೆ ಬಂದಿದ್ದ ಮಗುವೊಂದು ಹಾವು ತುಳಿಯಲಿದ್ದು, ಓಡಿ ಬಂದು ಮಗುವಿನ ರಕ್ಷಣೆ ಮಾಡಿದ ಬೀದಿ ನಾಯಿ

Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಗುಂಪಿನಲ್ಲಿದ್ದ ಮಗುವೊಂದು ಹಾವನ್ನು ತುಳಿಯುವುದನ್ನು ಬೀದಿನಾಯಿಯೊಂದು ರಕ್ಷಣೆ ಮಾಡಿದ ಘಟನೆಯೊಂದು ನಡೆದಿದೆ.

 

ಇದನ್ನೂ ಓದಿ: Rahul Gandhi: ʼಹಿಜಾಬ್‌ʼ ಧರಿಸುವ ಕುರಿತು ರಾಹುಲ್‌ ಗಾಂಧಿ ಮಹತ್ವದ ಹೇಳಿಕೆ

ಆದಿಸುಬ್ರಹ್ಮಣ್ಯ ಬಳಿ ಸಾಗುತ್ತಿದ್ದ ತಂಡವೊಂದರಲ್ಲಿ ಮಹಿಳೆಯೊಬ್ಬರು ಚಿಕ್ಕ ಮಗುವನ್ನು ರಸ್ತೆಯಲ್ಲಿ ಬಿಟ್ಟು ಪಕ್ಕದ ಅಂಗಡಿಗೆಂದು ಹಣ್ಣು ಕಾಯಿ ಖರೀದಸಲು ಹೋಗಿದ್ದರು. ಆಗ ಮಗು ರಸ್ತೆಯ ಬದಿಗೆ ಬಂದಿದೆ. ಅದೇ ಸಮಯದಲ್ಲಿ ನಾಗರಹಾವೊಂದು ರಸ್ತೆ ದಾಟುತ್ತಿತ್ತು. ಮಗು ಇನ್ನೇನು ಹಾವನ್ನು ತುಳಿಯಬೇಕು ಎನ್ನುವಷ್ಟರಲ್ಲಿ ಅಲ್ಲೇ ಮಲಗಿದ್ದ ನಾಯಿಯೊಂದು ಓಡಿ ಹೋಗಿ ಮಗುವಿಗೆ ಅಡ್ಡ ನಿಂತಿದೆ. ಹಾಗೂ ಹಾವನ್ನು ತುಳಿಯದಂತೆ ಹಾಗೂ ಹಾವು ಸಾರಾಗವಾಗಿ ಹೋಗಲು ಅವಕಾಶ ನೀಡಿದೆ.

ನಾಗ ದೇವರ ಸನ್ನಿಧಿಯಲ್ಲಿ ಮಗುವಿನ ರಕ್ಷಕನಾಗಿ ನಾಯಿಯೊಂದು ಜೀವ ಉಳಿಸಿದ್ದು, ನಿಜಕ್ಕೂ ಆಶ್ಚರ್ಯಕರ. ಇದೀಗ ಈ ಘಟನೆಯ ಪ್ರತ್ಯಕ್ಷದರ್ಶಿಗಳು ಈ ಸುದ್ದಿಯನ್ನು ತಿಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬರಹ ವೈರಲ್‌ ಆಗಿದೆ.

Leave A Reply

Your email address will not be published.