Gmail: ಆಗಸ್ಟ್ನಲ್ಲಿ ಜೀಮೇಲ್ ಸ್ಥಗಿತ! : ಗೂಗಲ್ ಹೇಳಿದ್ದೇನು?
ಈ ವರ್ಷದ ಕೊನೆಯಲ್ಲಿ ಈ ಸೇವೆ ಕೊನೆಗೊಳ್ಳಲಿದೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವದಂತಿಗಳು ಹರಡಿದ ನಂತರ, ಗೂಗಲ್ ತನ್ನ ಇಮೇಲ್ ಸೇವೆಯಾದ ಜಿಮೇಲ್ ಅನ್ನು ಸ್ಥಗಿತಗೊಳಿಸುತ್ತಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದೆ.
https://x.com/gmail/status/1760796097583194560?t=h4F1lE_9v_-cpuaOf11Rew&s=08
ಇದನ್ನೂ ಓದಿ: 7th pay commission: ವೇತನ ಆಯೋಗದ ಮುಂದೆ, ಹೊಸ ಬೇಡಿಕೆಯನ್ನಿಟ್ಟ ಪೊಲೀಸ್ ಇಲಾಖೆ,
“ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸುವ, ಸಂವಹನವನ್ನು ಸಕ್ರಿಯಗೊಳಿಸುವ ಮತ್ತು ಲೆಕ್ಕವಿಲ್ಲದಷ್ಟು ಸಂಪರ್ಕಗಳನ್ನು ಬೆಳೆಸುವ, ಜಿಮೇಲ್ ಪ್ರಯಾಣವು ಕೊನೆಗೊಳ್ಳುತ್ತಿದೆ. ಆಗಸ್ಟ್ 1,2024 ರಿಂದ, ಜಿಮೇಲ್ ಅಧಿಕೃತವಾಗಿ ತನ್ನ ಕಾರ್ಯ ನಿಲ್ಲಿಸಲಿದೆ. ಇದರರ್ಥ ಇನ್ನು ಮುಂದೆ ಇಮೇಲ್ಗಳನ್ನು ಕಳುಹಿಸಲು, ಸ್ವೀಕರಿಸಲು ಅಥವಾ ಸಂಗ್ರಹಿಸಲು ಜಿಮೇಲ್ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ” ಎಂದು ಸ್ಕ್ರೀನ್ಶಾಟ್ನಲ್ಲಿ ಬರೆಯಲಾಗಿತ್ತು.
ಆದರೆ ಈ ವದಂತಿಗಳಿಗೆಲ್ಲ ಗೂಗಲ್ ಅಂತಿಮವಾಗಿ ಉತ್ತರಿಸಿದ್ದು “ಜಿಮೇಲ್ ಇಲ್ಲಿಯೇ ಉಳಿಯುತ್ತದೆ”, ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿ ವದಂತಿಗಳಿಗೆ ಅಂತ್ಯ ಹಾಡಿದೆ