Marriage And Divorce: ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದತಿಗೆ ಅಸ್ಸಾಂ ಸಚಿವ ಸಂಪುಟ ಅಸ್ತು
ರಾಜ್ಯದಲ್ಲಿ ವಾಸಿಸುವ ಮುಸ್ಲಿಮರ ಮದುವೆ ಮತ್ತು ವಿಚ್ಛೇದನಗಳ ನೋಂದಣಿಯನ್ನು ಒಳಗೊಂಡ 89 ವರ್ಷಗಳಷ್ಟು ಹಳೆಯದಾದ ಶಾಸನವನ್ನು ರದ್ದುಗೊಳಿಸಲು ಅಸ್ಸಾಂ ಸಚಿವ ಸಂಪುಟ ಶುಕ್ರವಾರ ನಿರ್ಧರಿಸಿದೆ.
ಇದನ್ನೂ ಓದಿ: Diabetes: ಶುಗರ್ ಇರುವವರು ಇದೊಂದು ಹಣ್ಣು ತಿಂದರೆ ಸಾಕು, ಕೆಲವೇ ದಿನಗಳಲ್ಲಿ ಡೌನ್ ಆಗಿಬಿಡುತ್ತದೆ.
“ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗುವುದು ಎಂದು ನಮ್ಮ ಮುಖ್ಯಮಂತ್ರಿ ಹಿಮಂತಾ ಬಿಸ್ವ ಶರ್ಮಾ ಈಗಾಗಲೇ ಘೋಷಿಸಿದ್ದರು. ಇಂದು ನಾವು ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ, 1935 ಅನ್ನು ರದ್ದುಗೊಳಿಸಲು ನಿರ್ಧರಿಸುವ ಮೂಲಕ ಬಹಳ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ “ಎಂದು ಪ್ರವಾಸೋದ್ಯಮ ಸಚಿವ ಜಯಂತ ಮಲ್ಲಾ ಬರುವಾ ಮಾಹಿತಿ ನೀಡಿದ್ದಾರೆ.
“ಇನ್ನು ಮುಂದೆ ಅಸ್ಸಾಂನಲ್ಲಿ ಈ ಹಳೆಯ ಕಾಯ್ದೆಯ ಅಡಿಯಲ್ಲಿ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳನ್ನು ನೋಂದಾಯಿಸಲು ಸಾಧ್ಯವಾಗುವುದಿಲ್ಲ. ನಾವು ಈಗಾಗಲೇ ವಿಶೇಷ ವಿವಾಹ ಕಾಯ್ದೆಯನ್ನು ಹೊಂದಿದ್ದೇವೆ ಮತ್ತು ಅದರ ನಿಬಂಧನೆಗಳ ಅಡಿಯಲ್ಲಿ ಎಲ್ಲಾ ವಿವಾಹಗಳನ್ನು ನೋಂದಾಯಿಸಬೇಕೆಂದು ನಾವು ಬಯಸುತ್ತೇವೆ “ಎಂದು ಬರುವಾ ಹೇಳಿದರು.
ಈ ಮೂಲಕ ಏಕರೂಪ ನಾಗರಿಕ ಸಂಹಿತೆಯತ್ತ ಒಂದು ಹೆಜ್ಜೆ ಮುಂದೆ ಇಡುವುದರ ಜೊತೆಗೆ, ಬ್ರಿಟಿಷ್ ಕಾಲದಿಂದಲೂ ಚಾಲ್ತಿಯಲ್ಲಿದ್ದ ಮತ್ತು ಇಂದಿನ ಸಾಮಾಜಿಕ ರೂಢಿಗಳಿಗೆ ಹೊಂದಿಕೆಯಾಗದ ಈ ಕಾಯ್ದೆಯನ್ನು ರದ್ದುಗೊಳಿಸುವುದು ಅಗತ್ಯವೆಂದು ಸಂಪುಟವು ಭಾವಿಸಿದೆ ಎಂದು ಅವರು ಹೇಳಿದರು.