Uttar Pradesh: 10 ರ ಬಾಲೆಯ ಕನಸಿನಲ್ಲಿ ಕಂಡ ಶ್ರೀ ಕೃಷ್ಣ! ಎಲ್ಲಿದೆ ಎಂದು ಕನಸು ಬಿತ್ತೋ ಅಲ್ಲೇ ಇತ್ತು ಮೂರ್ತಿ
ಉತ್ತರ ಪ್ರದೇಶ: ಶಹಜಹಾನ್ ಪುರ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ಕೃಷ್ಣನ ವಿಗ್ರಹವನ್ನು ನೆಲದಲ್ಲಿ ಹೂಳಲಾಗಿರುವ ಹಾಗೇ ನನಗೆ ಕನಸು ಬಿದ್ದಿದೆ. ಎಂದು ಹೇಳಿದ ಜಾಗದಲ್ಲಿ ನಿಜಾವಾಗಿಯೂ ಕೃಷ್ಣನ ವಿಗ್ರಹ ಪತ್ತೆಯಾಗಿದೆ.
ಇದನ್ನೂ ಓದಿ: Bengaluru: ಸರ್ಕಾರದಿಂದ ದೇವಾಲಯಗಳ ಮೇಲೆ ಶೇ 10ರಷ್ಟು ತೆರಿಗೆ ಮಸೂದೆ ಮಂಡನೆ: ಹಿಂದೂ ವಿರೋಧಿ ಎಂದು ವಾಗ್ದಾಳಿ ನಡೆಸಿದ ಬಿಜೆಪಿ
ನಿಗೋದ 10 ವರ್ಷದ ಬಾಲಕಿಯು ಕನಸಿನಲ್ಲಿ ಕೃಷ್ಣನ ವಿಗ್ರಹವನ್ನು ನೋಡಿದ್ದಾಳೆ. ಈ ವಿಚಾರ ಕೇಳಿದ ಸ್ಥಳೀಯರು ಆ ಸ್ಥಳವನ್ನು ಹಗೆದಾಗ ಆ ಜಾಗದಲ್ಲೇ ವಿಗ್ರಹ ದೊರೆತಿದೆ. ಈ ವಿಚಾರವಾಗಿ ಸ್ಥಳೀಯರು ಅಚ್ಚರಿ ಗೆ ಒಳಗಾಗಿದ್ದಾರೆ.
ಪೂಜಾ ಎಂಬ ಹುಡುಗಿಗೆ ಒಂದು ದಿನ ಕನಸಿನಲ್ಲಿ ವಿಗ್ರಹ ಇರುವುದು ತಿಳಿಯುತ್ತದೆ. ಈ ಮಾಹಿತಿಯನ್ನು ಮನೆಯವರಿಗೆ ಹೇಳುತ್ತಾಳೆ. ಆದರೆ ಅವರು ಇವಳ ಮಾತಿಗೆ ತಲೆಕೆಡಿಸಿ ಕೊಳ್ಳುವುದಿಲ್ಲ. ನಂತರ ಪೂಜಾ ಹಠಕ್ಕೆ ಬಿದ್ದು, ಆ ನೆಲವನ್ನು ಅಗೆಯಬೇಕು ಎಂದು 7 ದಿನ ಉಪವಾಸ ಮಾಡುತ್ತಾಳೆ. ನಂತರ ದರ್ಗಾದ ಬಳಿ ಪೊಲೀಸರ ಸಹಕಾರದೊಂದಿಗೆ ನೆಲ ಅಗೆದಾಗ ಮೂರ್ತಿ ಸಿಕ್ಕಿದೆ.
ಸಿಕ್ಕ ಕೃಷ್ಣನ ವಿಗ್ರಹವನ್ನು 2 ಕಿಲೋಮೀಟರ್ ದೂರದ ಗದ್ದೆಯಲ್ಲಿ ಇಟ್ಟು ಪೂಜೆ ಸಲ್ಲಿಸಿದ್ದಾರೆ.