ಅಣಬೆ ರೋಗಕ್ಕೆ ಇಲ್ಲಿದೆ ಪರಿಹಾರ!! ಹೀಗೆ ಮಾಡಿದರೆ ಸಾಕು.

mushroom disease:ತೆಂಗು ಹಾಗೂ ಅಡಿಕೆಯಲ್ಲಿ ಅಣಬೆ ರೋಗ (mushroom disease)ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸೂಕ್ತ ಏನೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕೆಂದು ನೋಡುತ್ತ ಹೋಗೋಣ.

 

ಇಂದು ಬಹುತೇಕ ತೋಟಗಳಲ್ಲಿ ಅಣಬೆ ರೋಗ ಕಾಣಿಸಿಕೊಂಡಿದ್ದು, ಇದಕ್ಕೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕಿದೆ. ಇಲ್ಲವಾದರೆ ಇಡೀ ತೋಟವೇ ನಾಶವಾಗುತ್ತದೆ.

 

ನಿವಾರಣೆ ಕ್ರಮ

 

ಮರದ ಸುತ್ತಲೂ 5 ಅಡಿ ಅಂತರದಲ್ಲಿ90 ಸೆಂ. ಮೀ. ಆಳ, 30 ಸೆಂ. ಮೀ. ಅಗಲವಿರುವ ಗುಂಡಿಯನ್ನು ಮಾಡಿ ಸುಣ್ಣ ಹಾಗೂ ತಾಮ್ರದ ಸಲ್ಫೇಟ್‌ನನ್ನು ಗುಂಡಿಯೊಳಗೆ ಹಾಕಬೇಕು. ಈಗೆ ಮಾಡುವುದರಿಂದ ರೋಗವು ಬೇರೆ ಮರಗಳಿಗೆ ಹರಡದಂತೆ ತಡೆಯಬಹುದು. ರೋಗ ಬಂದಿರುವ ಮರಗಳಿಂದ ಆರೋಗ್ಯಕರವಾದ ಪೆನ್ಸಿಲ್‌ ಗಾತ್ರದ ಬೇರನ್ನು ಓರೆಯಾಗಿ ಕತ್ತರಿಸಿ, 5ಮಿ. ಲೀ. ಹೆಕ್ಸಾಕೊನಜೋಲ್‌ನನ್ನು 100 ಮಿ. ಲೀ. ನೀರಿಗೆ ಹಾಕಿ ಬೇರಿಗೆ ನೀಡಬೇಕಾಗುತ್ತದೆ.

 

ಕಂದು ಚುಕ್ಕೆ ರೋಗ

 

ಅಡಿಕೆಯಲ್ಲಿ ಕಂದುಚುಕ್ಕೆ ರೋಗವು ಕಂಡು ಬರುತ್ತಿದೆ. ಅದಕ್ಕೆ ಹಸಿರೆಲೆ ಗೊಬ್ಬರ, ಇಂಗು ಗುಂಡಿಗಳು, ಬೇವಿನ ಬೀಜದ ತಿರುಳಿನ ದ್ರಾವಣ, ಟೈಕೋಡರ್ಮಾ ಬಳಸುವುದರಿಂದ ಗಿಡಗಳು ಗುಣವಾಗುತ್ತವೆ.

 

ಶುಂಠಿ ಎಲೆ ಚುಕ್ಕೆರೋಗ

 

ಪೊಟ್ಯಾಷ್‌, ಕಬ್ಬಿಣ, ಬೊರಾನ್‌ ಹಾಗೂ ಸತುವಿನ ಕೊರತೆಯ ಈ ರೋಗಕ್ಕೆ ಮುಖ್ಯ ಕಾರಣವಾಗಿದೆ. ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡಬೇಕು. ತೆಂಗಿನಲ್ಲಿಸುಳಿಕೊಳೆ ರೋಗಕ್ಕೆ 6 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‌ ಅನ್ನು 2 ಲೀ ನೀರಿನಲ್ಲಿ ಬೆರಿಸಿ ಕತ್ತರಿಸಿದ ಸುಳಿಯ ಭಾಗಕ್ಕೆ ಹಾಕಬೇಕು. ಕಾಂಡ ಕೊಳೆ ರೋಗಕ್ಕೆ ಗಿಡದ ಸುತ್ತಲು ಗುಂಡಿ ಮಾಡಿ ಸುಣ್ಣದ ನೀರನ್ನು ಹಾಕಬೇಕು. ನಂತರ ಮೂರು ದಿನಗಳ 2ಗ್ರಾಂ ರಿಡೋಮಿಲನ್ನು 100 ಮೀ.ಲೀ ನೀರಿನಲ್ಲಿ ಬೆರಸಿ ಹಾಕಬೇಕು . ಆಲೂಗೆಡ್ಡೆಯಲ್ಲಿ ಮೆಗ್ನೀಷಿಯಂ ಕೊರತೆ, ಬಾಳೆಯಲ್ಲಿ ಪೊಟ್ಯಾಷ್‌, ಸತು, ಕ್ಯಾಲ್ಸಿಯಂ, ರಂಜಕದ ಕೊರತೆ ಕಂಡುಬಂದಿದೆ. ಇವುಗಳಿಗೆ ಸೂಕ್ತ ಪೋಷಕಾಂಶಗಳನ್ನು ಒದಗಿಸಬೇಕು.

 

ಈ ಕ್ರಮಗಳನ್ನು ಅನುಸರಿಸುವುದರಿಂದ ವಾಣಿಜ್ಯ ಬೆಳೆಗಳಾದ ಬಾಳೆ, ಅಡಿಕೆ ಹಾಗೂ ತೆಂಗನ್ನು ರೋಗಗಳಿಂದ ರಕ್ಷಣೆ ಮಾಡಬಹುದು

ಇದನ್ನೂ ಓದಿ : ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಇಲ್ಲಿದೆ ಔಷಧಿ!

Leave A Reply

Your email address will not be published.