ಗೃಹಲಕ್ಷ್ಮೀ ಸೌಲಭ್ಯ ತಿರಸ್ಕರಿಸಿದ ಮಹಿಳೆಯರು; ಉತ್ತರ ಕನ್ನಡದಲ್ಲಿ ಯೋಜನೆ ಬಗ್ಗೆ ನಿರಾಸಕ್ತಿ

Gruha Lakshmi Scheme In Uttara Kannada : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಾಸಕ್ತಿ ವ್ಯಕ್ತವಾಗಿದೆ. ಸಾವಿರಕ್ಕೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ(Gruha Lakshmi Scheme) ಹಣವನ್ನು ತಿರಸ್ಕರಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳಿ ಎಂದು ಜಾಗೃತಿ ಮೂಡಿಸಲು ಹೋದಾಗ ಮಹಿಳೆಯರು ಯೋಜನೆ ಬೇಡ ಎಂದು ಹೇಳಿದ್ದಾರೆ.
ಹೈಲೈಟ್ಸ್:
ಗೃಹಲಕ್ಷ್ಮೀ ಯೋಜನೆ ಬೇಡ ಎಂದ ಉತ್ತರ ಕನ್ನಡದ ಮಹಿಳೆಯರು
ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ಮಾಸಿಕ 2000 ರೂ. ಸೌಲಭ್ಯ ನಿರಾಕರಣೆ
ಅಂಗನವಾಡಿ ಕಾರ್ಯಕರ್ತೆಯರ ಮಾಹಿತಿ ಸಂಗ್ರಹದಲ್ಲಿ ಬಹಿರಂಗ
ಪ್ರತಿ ತಿಂಗಳು ಯಾವುದೇ ಆಯಾಸವಿಲ್ಲದೆ ಎರಡು ಸಾವಿರ ರೂ. ಖಾತೆಗೆ ಜಮಾವಾಗುತ್ತೆ ಅಂದ್ರೆ ಯಾರು ಬೇಡ ಎಂದಾರು ಅಲ್ಲವೇ? ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು ಸಾವಿರದಷ್ಟು ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಹಣವನ್ನು ನಮಗೆ ಬೇಡ ಎಂದಿದ್ದಾರೆ.
ಅಚ್ಚರಿ ಏನಿಸಿದರೂ ಇದು ಸತ್ಯ. ಹೀಗೆ ಬೇಡ ಎಂದ ಮಹಿಳೆಯರ ಅಂಕಿ ಸಂಖ್ಯೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲೆಯಲ್ಲಿ ಕ್ರೋಡೀಕರಿಸಿದೆ. ಗೃಹಲಕ್ಷ್ಮೀಗೆ ನೋಂದಣಿ ಮಾಡಿಕೊಳ್ಳಿ ಎಂದು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ವೇಳೆ ಈ ಮಹಿಳೆಯರು ಯೋಜನೆ ಸೌಲಭ್ಯ ಬೇಡ ಎಂದು ನಿರಾಕರಿಸಿದ್ದಾರೆ. ಆದರೆ, ನಿರಾಕರಣೆಗೆ ಕಾರಣ ಸರಿಯಾಗಿ ತಿಳಿದಿಲ್ಲ.
ಹಲವು ತಾಂತ್ರಿಕ ದೋಷಗಳಿಂದಾಗಿ ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ದೊರೆತಿರಲಿಲ್ಲ. ಇನ್ನು ಕೆಲವು ಮಹಿಳೆಯರು ನೋಂದಣಿ ಮಾಡಿಕೊಳ್ಳಲು ಹೋದಾಗಲೂ ತಾಂತ್ರಿಕ ದೋಷದಿಂದ ಸಾಧ್ಯವಾಗಿಲ್ಲ. ಇಂಥಾ ಸ್ಥಿತಿಯಲ್ಲಿ ಶಿರಸಿ ಭಾಗದ ಮಹಿಳೆಯರು ಯೋಜನೆಯನ್ನು ಬೇಡ ಎಂದಿದ್ದಾರೆ.
ಮನೆಮನೆಗೆ ಭೇಟಿ
ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿಯಾಗುವಂತೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ನೋಂದಣಿ ಮಾಡಿಕೊಂಡಿದ್ದೀರಾ? ಯಾಕೆ ಮಾಡಿಕೊಂಡಿಲ್ಲ? ಎಂಬ ಕೇಳಿದಾಗ 992 ಮಂದಿ ಮಹಿಳೆಯರು ತಮಗೆ ಗೃಹಲಕ್ಷ್ಮಿ ಯೋಜನೆ ಬೇಡ ಎಂದು ನೇರವಾಗಿ ಹೇಳಿದ್ದಾರೆ. ಇನ್ನು ಐಟಿ ಹಾಗೂ ಜಿಎಸ್‌ಟಿ ಕಟ್ಟುವವರಿಗೆ ಈ ಯೋಜನೆ ಲಾಭ ಆಗುವುದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಐಟಿ ಹಾಗೂ ಜಿಎಸ್‌ಟಿ ಕಟ್ಟುವ 6312 ಮಂದಿಯು ಸಹ ಈ ಯೋಜನೆಗೆ ನೋಂದಣಿ ಮಾಡಿಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಹೆಚ್ಚುತ್ತಿರುವ ನೋಂದಣಿ
ಆಗಸ್ಟ್ ತಿಂಗಳಿನಿಂದ ಇಲ್ಲಿಯ ವರೆಗೂ ಗೃಹಲಕ್ಷ್ಮೀ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 3 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಆಗಸ್ಟ್‌ನಲ್ಲಿ 2,85,827 ಇದ್ದಿದ್ದು, ನಂತರ ಸೆಪ್ಟೆಂಬರ್‌ನಲ್ಲಿ 2,95,937ಕ್ಕೆ ಹೆಚ್ಚಾಯಿತು. ಅಕ್ಟೋಬರ್‌ನಲ್ಲಿ 2,98,654, ನವೆಂಬರ್‌ನಲ್ಲಿ 2,99,209, ಡಿಸೆಂಬರ್‌ನಲ್ಲಿ 2,99,772. ಆ ನಂತರ ಈವರೆಗೆ 3,13,198 ಮಹಿಳೆಯರು ಯೋಜನೆಯ ಸೌಲಭ್ಯಕ್ಕೆ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಒಂದಷ್ಟು ಮಹಿಳೆಯರಿಗೆ ತಾಂತ್ರಿಕ ದೋಷದಿಂದ ಅವರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಇನ್ನುಳಿದವರಿಗೆ ಒಂದಷ್ಟು ಕಂತುಗಳಲ್ಲಿ ಹಣ ಜಮಾ ಆಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 992 ಮಂದಿ ಮಹಿಳೆಯರು ತಮಗೆ ಗೃಹಲಕ್ಷ್ಮೀ ಯೋಜನೆ ಬೇಡ ಎಂದು ಹೇಳಿರುವ ಬಗ್ಗೆ ಅಂಕಿ ಸಂಖ್ಯೆ ಸಂಗ್ರಹ ಮಾಡಿದ್ದೇವೆ. ಈ ಬಗ್ಗೆ ಯಾವ ಮಹಿಳೆಯರೂ ಅಧಿಕೃತವಾಗಿ ಪತ್ರ ನೀಡಿಲ್ಲ. ಕೇವಲ ಮೌಖಿಕವಾಗಿ ಹೇಳಿದ್ದಾರೆ. ಇದರ ಮೇಲೆ ಮಾಹಿತಿ ಸಂಗ್ರಹಿಸಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಹುಲಿಗೆಮ್ಮ ಹೇಳಿದ್ದಾರೆ
ಇದನ್ನೂ ಓದಿ : ಅಣಬೆ ರೋಗಕ್ಕೆ ಇಲ್ಲಿದೆ ಪರಿಹಾರ!ಹೀಗೆ ಮಾಡಿದರೆ ಸಾಕು
It’s a pity youu don’t have a ddonate button! I’d cerainly donatte to tis brilliat blog!
I uppose for noow i’ll settle for bookmarking and adding your RSS feed to mmy Google account.
I llook orward to neew updatees annd will alk abut thiss website
with myy Facebook group. Chat soon!