ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಇಲ್ಲಿದೆ ಔಷಧಿ!;

Arecanut leaf spot disease :ಎಲೆ ಚುಕ್ಕೆ ರೋಗ(Arecanut leaf spot disease)ದಿಂದ ಅಡಿಕೆ ಸೋಗೆಗಳು ಸೊರಗಿ ಹೋಗುವುದರ ಜೊತೆಗೆ ಅಡಿಕೆ ಮರ ದುರ್ಬಲಗೊಳ್ಳುತ್ತ ಹೋಗುತ್ತದೆ. ಅಡಿಕೆ ಇಳುವರಿ ದಿನೇದಿನೇ ಕಡಿಮೆಯಾಗುತ್ತದೆ.

 

ಅಡಿಕೆಯು ಬಹುತೇಕ ಜನರ ಜೀವನಾಡಿ. ಆದರೆ ಹವಾಮಾನ ವೈಪರೀತ್ಯದಿಂದ ಅಡಿಕೆಗೆ ಎಲೆ ಚುಕ್ಕೆ ರೋಗ ಬರುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಕೊಲ್ಲೇಟೋಟ್ರೈಕಮ್ ಗ್ಲಿಯೋಸ್ಪೊರೈಡ್ಸ್ ಹಾಗೂ ಫಿಲೋಸ್ಟಿಕಾ ಅರೇಕಾ ಎಂಬ ಶಿಲೀಂಧ್ರಗಳು ಅಡಿಕೆಯ ಗರಿಗಳ ಮೇಲೆ ಬೆಳೆದು ನಿಲ್ಲುವ ಮೂಲಕ ರೋಗ ಉಂಟಾಗುತ್ತದೆ ಎಂದು ತಜ್ಞರ ಅಭಿಪ್ರಾಯ. ಕೆಳಗೆ ಬಿದ್ದ ಗರಿಗಳ ಮೇಲೆ ಸಂತಾನೋತ್ಪತ್ತಿ ಇವು ಮಾಡುತ್ತವೆ. ಗಾಳಿಯಿಂದ ಹರಡುವ ಈ ಶಿಲೀಂಧ್ರಗಳು ಇಳುವರಿಗೆ ಮಾರಕವಾಗಿ ಪರಿಣಮಿಸುತ್ತವೆ. ಅಲ್ಲದೇ ಅಡಿಕೆ ಮರಗಳ ಜೀವಿತಾವಧಿಯನ್ನು ಹಾಳು ಮಾಡುತ್ತದೆ.

 

ಕರ್ನಾಟಕದಲ್ಲಿ ಒಟ್ಟು 35,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯನ್ನು ಬೆಳೆಯುತ್ತಾರೆ. ಅದರಲ್ಲಿ 3500 ಹೆಕ್ಟೇರ್ ಪ್ರದೇಶ ರೋಗಕ್ಕೆ ತುತ್ತಾಗಿದೆ ಎಂದು ತೋಟಗಾರಿಕಾ ಇಲಾಖೆಯ ಮಾಹಿತಿಯನ್ನು ಹೊರ ಹಾಕಿದೆ.

 

ಅಡಕೆ ಎಲೆ ಚುಕ್ಕಿ ರೋಗ ತಡೆ ಹೇಗೆ?

 

ಇದಕ್ಕೆ ತೋಟಗಾರಿಕಾ ಇಲಾಖೆಯು ಆಸಕ್ತಿ ವಹಿಸಿದ್ದು ಓರ್ವ ರೈತನಿಗೆ ಒಂದು ಹೆಕ್ಟೇರ್ ಗೆ ಉಪಯೋಗವಾಗುವಷ್ಟು ಔಷಧಿಯನ್ನು ನೀಡುತ್ತಿದೆ.

ಮೊದಲನೇ ಕಂತಿನಲ್ಲಿ 20 ಲಕ್ಷ ಯುನಿಟ್ನಷ್ಟು ವಿತರಣೆಗೆ ಮುಂದಾಗಿದ್ದು, ಈಗಾಗಲೇ 90 ಪ್ರತಿಶತ ರೈತರಿಗೆ ಔಷಧಿಯು ತಲುಪಿಸಲಾಗಿದೆ.

 

ಔಷಧಿ ಪಡೆದುಕೊಳ್ಳುವುದು ಹೇಗೆ?

 

ನೀವು ಅಡಿಕೆ ಬೆಳೆಗಾರರಾಗಿದ್ದರೆ, ನಿಮ್ಮ ಪಹಣಿ ಪತ್ರದ ಪ್ರತಿಯನ್ನು ಹತ್ತಿರದ ತೋಟಗಾರಿಕಾ ಇಲಾಖೆಗೆ ನೀಡಿ ಔಷಧಿ ಪಡೆಯಬಹುದು ಎಂದು ತೋಟಗಾರಿಕಾ ಇಲಾಖೆಯು ತಿಳಿಸಿದೆ.

 

ಏನಿದು ಅಡಕೆ ಎಲೆ ಚುಕ್ಕಿ ರೋಗ?

 

ಈ ರೋಗಕ್ಕೆ ತುತ್ತಾದ ಮರಗಳ ಸೋಗೆಗಳಲ್ಲಿ ಹಳದಿ ಮತ್ತು ಕಪ್ಪು ಚುಕ್ಕೆ ಯಾಗಿರುತ್ತವೆ. ಈ ಚಿಕ್ಕ ಚಿಕ್ಕ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಳ್ಳುತ್ತಾ ಇಡೀ ಅಡಕೆ ಮರದ ಗರಿಗಳನ್ನು ವ್ಯಾಪಿಸುತ್ತವೆ. ಇದೇ ಅಡಕೆ ಮರದ ಅವನತಿಗೆ ಕಾರಣವಾಗಿದೆ. ಅಡಿಕೆ ಸೋಗೆಗಳು ಸೊರಗಿ, ಒಣಗಿ ಅಡಕೆ ಮರ ಬಲಹೀನಗೊಳ್ಳುತ್ತಾ ಹೋಗುತ್ತದೆ. ಅಡಕೆ ಇಳುವರಿ ಕಡಿಮೆಯಾಗುತ್ತದೆ.

ಇದನ್ನೂ ಓದಿ : ಭಾರತದಲ್ಲೇ ಅತ್ಯಂತ ಖುಷಿ ರಾಜ್ಯ ಯಾವುದು ಗೊತ್ತಾ?ಇಲ್ಲಿನ ಜನರ ಖುಷಿಗೆ ಇದೆ ಕಾರಣವೇನು!!

Leave A Reply

Your email address will not be published.