Happiest State of India: ಭಾರತದಲ್ಲೇ ಅತ್ಯಂತ ಖುಷಿ ರಾಜ್ಯ ಯಾವುದು ಗೊತ್ತಾ? ಇಲ್ಲಿನ ಜನರ ಖುಷಿಗೆ ಇದೆ ಕಾರಣವೇನು!!

Do You Know: ಭಾರತದಲ್ಲಿರುವ ರಾಜ್ಯಗಳ ಪೈಕಿ ಹೆಚ್ಚು ಖುಷಿಯಾಗಿರುವ ರಾಜ್ಯ ಯಾವುದು ಗೊತ್ತಾ? (Do You Know)ದೆಹಲಿಯೂ ಅಲ್ಲ, ನಮ್ಮ ಕರುನಾಡು ಅಲ್ಲ. ಆ ರಾಜ್ಯದ ಜನರು ಸಂತೋಷದಿಂದ ಬದುಕನ್ನು ಕಟ್ಟಿಕೊಳ್ಳಲು ವಿವಿಧ ಕಾರಣಗಳೂ ಇವೆ.

 

ಮುಖ್ಯವಾಗಿ ಸಂತೋಷವೆಂಬುದು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಆರ್ಥಿಕ ಪರಿಹಾರ, ಕುಟುಂಬ ಸದಸ್ಯರೊಂದಿಗಿ ಹೊಂದಾಣಿಕೆ, ಉದ್ಯೋಗ ಭದ್ರತೆ, ಹೊಸ ಅವಕಾಶಗಳು ನಿಮ್ಮ ಸಂತೋಷವನ್ನು ನಿರ್ಧಾರ ಮಾಡುತ್ತದೆ. ಇದರೊಟ್ಟಿಗೆ ಒಳ್ಳೆಯ ಜೀವನಶೈಲಿಯನ್ನು ಒಳಗೊಂಡಂತೆ ಇತರ ಅಂಶಗಳು ಮನುಷ್ಯನ ಸಂತೋಷವಾಗಿರಲು ಕಾರಣವಾಗುತ್ತವೆ.

 

ಕೆಲವೊಮ್ಮೆ ನೆರೆಹೊರೆಯವರ ಹಾಗೂ ಸಹೋದ್ಯೋಗಿಗಳ ಜೊತೆಗಿನ ಆತ್ಮೀಯ ಸಂಬಂಧವೂ ಸಂತೋಷಕ್ಕೆ ಕಾರಣವಾಗುತ್ತದೆ. ಈ ಅಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತವೆ.

 

ಭಾರತದ ಅತ್ಯಂತ ಸಂತೋಷದ ರಾಜ್ಯ ಯಾವುದು ಗೊತ್ತಾ? ದೆಹಲಿಯಂತೂ ಅಲ್ಲ. ಉತ್ತರ ಪ್ರದೇಶ, ಗುಜರಾತ್ ಸಹ ಅಲ್ಲ. ಇನ್ನು ದಕ್ಷಿಣ ಭಾಗದ ಕೇರಳ-ಕರ್ನಾಟಕವೂ ಅಲ್ಲ. ಪೂರ್ವದ ಪಶ್ಚಿಮ ಬಂಗಾಳವೂ ಅಲ್ಲ. ಹಾಗಾದ್ರೆ ಯಾವ ರಾಜ್ಯದ ಜನರು ಸಂತೋಷವಾಗಿದ್ದಾರೆ ಎಂಬುದರ ಮಾಹಿತಿ ನೋಡೋಣ. ಇವರ ಸಂತೋಷದ ಹಿಂದಿನ ರಹಸ್ಯವೇನು ಎಂಬುವುದು ಇತ್ತೀಚೆಗೆ ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ.

 

ಭಾರತದ ಅತ್ಯಂತ ಸಂತೋಷದ ರಾಜ್ಯ ಈಶಾನ್ಯದಲ್ಲಿರುವ ಮಿಜೋರಾಂ. ಈ ಸಂತೋಷದ ಹಿಂದೆ ಹಲವಾರು ಕಾರಣಗಳಿದ್ದು, ಶೇ.100 ರಷ್ಟು ಜನರು ಸಾಕ್ಷರರಾಗಿರುವ ದೇಶದ ಎರಡನೇ ರಾಜ್ಯ ಮಿಜೋರಾಂ ಆಗಿದೆ. ಮಿಜೋರಾಂ ಜನರ ಸಂತೋಷದ ಹಿಂದೆ ಒಂದು ಅಚ್ಚರಿಯ ಇದೆ. ಆ ಕಾರಣವೇನು ಗೊತ್ತಾ?

 

ಇತ್ತೀಚೆಗೆ ಗುರುಗ್ರಾಮ್‌ನ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಉಪನ್ಯಾಸಕರ ರಾಜೇಶ್ ಕೆ ಪಿಲಾನಿಯಾ ಎಂಬವರು ಈ ಬಗ್ಗೆ ಒಂದು ಸಮೀಕ್ಷೆಯನ್ನು ನಡೆಸಿದ್ದಾರೆ. ಮಿಜೋರಾಂನ ಸಂತೋಷದ ಸೂಚ್ಯಂಕವನ್ನು ಆರು ಅಂಶಗಳ ಮೂಲಕ ಪರಿಶೀಲಿಸಿ ನಿರ್ಧರಿಸಲಾಗುತ್ತದೆ. ಕುಟುಂಬ ಸಂಬಂಧಗಳು, ಕೆಲಸದಲ್ಲಿ ಸಂತೋಷ, ಸಾಮಾಜಿಕ ಯೋಗಕ್ಷೇಮ, ಸಮಾಜ ಸೇವೆ, ಧರ್ಮ, ಕರೋನಾ ಮತ್ತು ಮಿಜೋರಾಂನ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಅಂಶಗಳನ್ನು ಪರಿಗಣಿಸಿ ಸಂತೋಷದ ಸೂಚಂಕ್ಯವನ್ನು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ .

 

Eben-ezer Boarding School- ಈ ಶಾಲೆಯ ಪ್ರಕಾರ, ಮಿಜೋರಾಂನ ಸಾಮಾಜಿಕ ಮೂಲಸೌಕರ್ಯವು ಮಕ್ಕಳ ಸಂತೋಷಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ. ಮಿಜೋರಾಂನಲ್ಲಿ ಮುಖ್ಯವಾಗಿ ಜಾತಿ ವ್ಯವಸ್ಥೆ ಇಲ್ಲ. ಇಲ್ಲಿ ಗಂಡು -ಹೆಣ್ಣು ಎಂದು ಯೋಚನೆ ಮಾಡದೇ ಎಲ್ಲಾ ಮಕ್ಕಳು ಸಮಾನವಾಗಿ ಶಿಕ್ಷಣವನ್ನು ಪಡೆಯುತ್ತಾರೆ. ಇಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಚಿಕ್ಕ ವಯಸ್ಸಿನಲ್ಲಿಯೇ ಇಲ್ಲಿಯ ಯುವಕ-ಯುವತಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾರೆ.

 

ವರದಿಯ ಪ್ರಕಾರ, ಮಿಜೋರಾಂನ ಜನರು ಯಾವುದೇ ಕೆಲಸವನ್ನು ತೃಣವಾಗಿ ನೋಡುವುದಿಲ್ಲ. 16 ರಿಂದ 17 ವರ್ಷ ವಯಸ್ಸಿನೊಳಗೆ ಇಲ್ಲಿ ಮಕ್ಕಳು ಸ್ವತಃ ಕೆಲಸ ಹುಡುಕಿಕೊಳ್ಳುತ್ತಿದ್ದಾರೆ. ಈ ಮೂಲಕ ಆರ್ಥಿಕವಾಗಿ ಸದೃಢರಾಗುವ ಮೂಲಕ ಹೆಚ್ಚು ಪೋಷಕರ ಮೇಲೆ ಅವಲಂಬನೆ ಆಗುವುದಿಲ್ಲ.

 

ಮಿಜೋರಾಂನಲ್ಲಿ ವಿಚ್ಛೇದನ ಪ್ರಮಾಣ ಹೆಚ್ಚಿದೆ. ಇಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸ್ವತಂತ್ರವಾಗಿರಲು ಶಕ್ತರಾಗಿದ್ದರೆ. ಜೀವನದ ಪ್ರತಿಯೊಂದ ಘಟ್ಟವನ್ನು ಎದುರಿಸುವ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ. ಒಂದು ದಂಪತಿ ಪ್ರತ್ಯೇಕವಾದರೂ ಯಾರ ಮೇಲೆಯೂ ಅವಲಂಬನೆ ಆಗಲ್ಲ. ಕಾರಣ ಅವರು ಆರ್ಥಿಕವಾಗಿ ಸಬಲರಾಗಿರುತ್ತಾರೆ. ತಮ್ಮ ಸಮಸ್ಯೆಗಳನ್ನು ಯಾರಿಗೂ ಹೊರೆಯನ್ನಾಗಿ ಮಾಡಲ್ಲ. ಆದ್ದರಿಂದ ಮಿಜೋರಾಂ ಜನರು ಸಂತೋಷದಿಂದ ಜೀವನ ನಡೆಸುತ್ತಾರೆ.

ಇದನ್ನೂ ಓದಿ :ರಂಬಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆದ ಮಹಿಳೆ!ಉದ್ವಿಗ್ನಗೊಂಡ ಪರಿಸ್ಥಿತಿ

Leave A Reply

Your email address will not be published.