Rambapuri Shri: ರಂಬಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆದ ಮಹಿಳೆ !!

Rambapuri Shri: ಬಾಗಲಕೋಟೆ ಜಿಲ್ಲೆಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದ ಈಗ ತಾರಕ್ಕೇರಿದ್ದು ಮಠದ ಭಕ್ತರು ರಂಬಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ.

ಇದನ್ನೂ ಓದಿ: Ayodhya rama mandir: ಬಂದ್ ಆಗಲಿದೆ ಅಯೋಧ್ಯೆಯ ‘ರಾಮಮಂದಿರ’ – ಏನಿದು ಹೊಸ ಸುದ್ದಿ?

ಹೌದು, ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ತಾರಕಕ್ಕೇರಿದ್ದು, ರಂಭಾಪುರಿ ಶ್ರೀ (Rambapuri Shri) ವಿರುದ್ಧ ಕಲಾದಗಿಯಲ್ಲಿ (Kaladagi Protest) ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ವಿವಾದ ಕೋರ್ಟ್ ನಲ್ಲಿದ್ದಾಗಲೇ ಗಂಗಾಧರ ಸ್ವಾಮೀಜಿ ಅವರಿಂದ ಮಠದ ದುರಸ್ತಿ ಮಠದ ಹೊಲದ ಉಳುಮೆಗೆ ಆಕ್ರೋಶ ವ್ಯಕ್ತವಾಗಿದೆ.

ಅಂದಹಾಗೆ ಶ್ರೀಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಭಕ್ತರು ಶ್ರೀಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ರಂಭಾಪುರಿ ಶ್ರೀಗಳು ಚಲಿಸುತ್ತಿದ್ದ ಕಾರಿಗೆ ಚಪ್ಪಲಿ ಮಹಿಳೆ ತೂರಿದ ಘಟನೆ ನಡೆದಿದೆ.

ಇನ್ನು ಕಲಾದಗಿ ಪಂಚಗೃಹ ಗುರುಲಿಂಗೇಶ್ವರ ಮಠದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗೂ ಮುನ್ನ ಹೇಳಿಕೆ ನೀಡಿದ ರಂಭಾಪುರಿ ಶ್ರೀ, ಕಲಾದಗಿಯಲ್ಲಿ ನಮ್ಮ ಕಾರ್ಯಕ್ರಮ ಇಲ್ಲ. ಅಲ್ಲಿ ನಾವು ಹೋಗೋದೂ ಇಲ್ಲ, ಅಭಿವೃದ್ಧಿ ಮಾಡಿದ್ರೆ ಒಳ್ಳೆಯದಲ್ಲವಾ? ಕೇಡು ಅಲ್ಲವಲ್ಲ, ನ್ಯಾಯಾಲಯ ಏನು ತೀರ್ಪು ಕೊಡುತ್ತೆ ಅದು ಇದ್ದೇ ಇರುತ್ತೆ. ಅಭಿವೃದ್ಧಿ ಮಾಡೋದನ್ನು ಕುಂಠಿತ ಮಾಡೋದು ಸರಿಯಲ್ಲ ಎಂದು ಹೇಳಿದರು.

Leave A Reply

Your email address will not be published.