Arecanut Farming: ಮೊಳಕೆಯೊಡೆದ ಅಡಿಕೆ ಸಸಿಗಳ ನಾಟಿ ಹೇಗೆ!! ಹೀಗೆ ಮಾಡಿ ಒಂದು ಸಸಿಯು ಒಣಗುವುದಿಲ್ಲ..
Arecanut Farming: ಸಾಮಾನ್ಯವಾಗಿ ಅಡಿಕೆ ಸಸಿಗಳನ್ನು ಭೂಮಿಯಲ್ಲಿ ಗೋಟುಗಳನ್ನು ಬಿಟ್ಟು ಬೆಳೆಸಿ ನಂತರ ಬೇರೆ ಕಡೆಗೆ ಸ್ಥಳಾಂತರ ಮಾಡಿ ಬೆಳೆಸುವ ಕ್ರಮವನ್ನು ಅನುಸರಿಸುತ್ತಾರೆ. ಕೆಲವರು ಮೊಳಕೆಯೊಡೆದ ಸಸಿಗಳನ್ನು ಪಾಕೆಟ್ನಲ್ಲಿ ಬೆಳೆಸುತ್ತಾರೆ. ಇನ್ನೂ ಕೆಲವರು ಭೂಮಿಯಲ್ಲಿ ನಾಟಿ ಮಾಡುವ ಮೂಲಕ ಬೆಳೆಸುತ್ತಾರೆ. ಭೂಮಿಯಲ್ಲಿ ಸುಲಭವಾಗಿ ಹೇಗೆ ಬೆಳೆಸುವುದು ಎಂದು ತಿಳಿಯೋಣ.
ಮೊದಲಿಗೆ ಅಡಿಕೆ ಸಸಿಯ ಮೊಳಕೆಯು ಎರಡು ಎಲೆಗಳನ್ನು ಹೊಂದಿರಬೇಕು. ಆಗ ಮಾತ್ರ ಅವು ನಾಟಿಗೆ ಸೂಕ್ತವಾದ ಸಸಿಗಳು. ಇದಕ್ಕಿಂತ ಚಿಕ್ಕದಾದ ಸಸಿಗಳನ್ನು ನಾಟಿ ಮಾಡಿದರೆ ಬಿಸಿಲಿನ ಬೇಗೆಗೆ ಸುಟ್ಟು ಹೋಗುತ್ತವೆ. ಆದರಿಂದ ಇದನ್ನು ಮೊದಲಿಗೆ ನೆನಪಿಡಬೇಕು.
ಮೊದಲು ಮೊಳಕೆಯ ಆಧಾರದ ಮೇಲೆ ನಾಟಿ ಮಾಡಬಯಸುವ ಸ್ಥಳವನ್ನು ಆಯ್ಕೆ ಮಾಡಬೇಕು. ನೀವು ನಾಟಿ ಮಾಡಲು ಬಯಸುವ ಸ್ಥಳದಲ್ಲಿ ಕಲ್ಲುಗಳು ಇರಬಾರದು. ಇದು ಮುಖ್ಯವಾದ ಅಂಶ. ಒಂದು ವೇಳೆ ಕಲ್ಲುಗಳು ಇದ್ದರೆ ಆ ಜಾಗದಲ್ಲಿ ಅಡಿಕೆ ಮೊಳಕೆ ಹಾಕಬೇಡಿ. ಕೆಂಪು ಮಣ್ಣು ಅಥವಾ ಜೇಡಿ ಮಣ್ಣು ಇದ್ದರೇ ಒಳ್ಳೆಯದು.
ಜಾಗವನ್ನು ಚೆನ್ನಾಗಿ ಉಳುಮೆ ಮಾಡಿ. ನಂತರ ಮಡಿ ಬದುಗಳನ್ನು ಮಾಡಿಕೊಂಡು ತೆಳುವಾಗಿ ನೀರನ್ನು ಹಾಯಿಸಿ ಒಂದು ದಿನ ಒಣಗಲು ಬಿಡಿ. ಮಾರನೇ ದಿನ ಆರೆ ಅಥವಾ ಇತರ ಕೊಲನ್ನು ಬಳಸಿ 1X 1 ಅಗಲಕ್ಕೆ ಒಂದೊಂದು ಪನ್ನಾರವನ್ನು (ಗುಂಡಿಯನ್ನು) ಅಂದರೆ ಗುಂಡಿಯಿಂದ ಗುಂಡಿಗೆ 1 ಅಡಿ ಅಂತರ ಇರುವಂತೆ, ಅಡಿಕೆಯ ಗೋಟು ಹಿಡಿಯುವಷ್ಟು ಮಾತ್ರ ಗುಂಡಿಯನ್ನು ತೆಗೆಯಬೇಕು.
ಈಗೆ ಮಾಡುವುದರಿಂದ ಅಡಿಕೆ ಸಸಿಗಳನ್ನು ಸೂಕ್ತ ರೀತಿಯಲ್ಲಿ ನಾಟಿ ಮಾಡಬಹುದು. ಸಸಿಗಳನ್ನು ನಾಟಿ ಮಾಡುವಾಗ ಬೇವಿನ ಹಿಂಡಿಯನ್ನು ಬಳಸುವುದು ಸೂಕ್ತ. ಮೊಳಕೆ ಸಸಿಗಳನ್ನು ನೆಡುವ ಮೊದಲು 2 ಗ್ರಾಂ ಬೇವಿನ ಹಿಂಡಿಯನ್ನು ಹಾಕಿ ನಂತರ ಮೊಳಕೆಯನ್ನು ಇಟ್ಟು ಮಣ್ಣು ಮುಚ್ಚಿ.
ಇದನ್ನೂ ಓದಿ: CM Siddaramaiah: ಪಂಚೆ ಉಟ್ಟಿದ್ದಕ್ಕೆ ಸಿಎಂ ಸಿದ್ದರಾಮಯ್ಯಗೆ ಕ್ಲಬ್ ಒಳಗೆ ನೋ ಎಂಟ್ರಿ !!
ಮೊಳಕೆಯನ್ನು ನಾಟಿ ಮಾಡುವಾಗ ಮೊಳಕೆಯ ಬಿಳಿ ಭಾಗದ ಕಾಂಡ ಪೂರ್ತಿಯಾಗಿ ಮಣ್ಣಿನಲ್ಲಿ ಮುಚ್ಚಬೇಕು. ಬಿಳಿ ಭಾಗ ಪೂರ್ತಿ ಮುಚ್ಚದೆ ಇದ್ದರೇ ಮೊಳಕೆ ಒಣಗಿ ಹೋಗುತ್ತದೆ.
ಈಗೆ ನಾಟಿ ಮಾಡಿದ ನಂತರ ವರಕ್ಕೆ ಎರಡು ಬಾರಿ. ಬಿಸಿಲನ್ನು ನೋಡಿಕೊಂಡು ನೀರನ್ನು ಹಾಯಿಸಿ. ಅತಿಯಾಗಿ ನೀರು ಹಾಯಿಸಿದರೆ ಮೊಳಕೆ ಕೊಳೆಯುತ್ತವೆ. ಹವಾಮಾನಕ್ಕೆ ತಕ್ಕಂತೆ ನೀರು ಕೊಡಿ. ಈಗೆ ಮಾಡುವುದರಿಂದ ಉತ್ತಮ ಅಡಿಕೆ ಸಸಿಗಳನ್ನು ಪಡೆಯಬಹುದು.