CM Siddaramaiah: ಪಂಚೆ ಉಟ್ಟಿದ್ದಕ್ಕೆ ಸಿಎಂ ಸಿದ್ದರಾಮಯ್ಯಗೆ ಕ್ಲಬ್ ಒಳಗೆ ನೋ ಎಂಟ್ರಿ !!

CM Siddaramaiah: ಸಿಎಂ ಸಿದ್ದರಾಮಯ್ಯನವರು ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ತಮ್ಮ ಜೀವನದ ಕೆಲವು ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅಂತೆಯೇ ಇದೀಗ ಅವರು ತಮಗಾದ ಕಹಿ ಅನುಭವವನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: Congress: ಕಾಂಗ್ರೆಸ್ ನಿಂದ ಮಾಜಿ ಸಿಎಂ ಔಟ್ !!

ಹೌದು, ಬಾಲಬ್ರೂಹಿ ಗೆಸ್ಟ್ ಹೌಸ್ ಕಟ್ಟಡದಲ್ಲಿ ಕರ್ನಾಟಕ ವಿಧಾನಮಂಡಲ ಸಂಸ್ಥೆ ಉದ್ಘಾಟನೆ ಹಾಗೂ ಕಟ್ಟಡದ ಪಾರಂಪರಿಕ ವಿನ್ಯಾಸಕ್ಕೆ ಒಳಪಟ್ಟು ನವೀಕರಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಸಿದ್ದರಾಮಯ್ಯ(CM Siddaramaiah)ಅವರು ‘ಹಿಂದೆ ನನಗೆ ತುಂಬಾ ಹಸಿವಾಗಿತ್ತು. ಆಗ ನಾನು ಊಟ ಮಾಡಲು ಕ್ಲಬ್‌ಗೆ ಹೋದೆ. ಆದರೆ ಪಂಚೆ ಉಟ್ಟುಕೊಂಡಿದ್ದಕ್ಕೆ ಡ್ರೆಸ್‌ ಕೋಡ್ ಸರಿಯಾಗಿಲ್ಲವೆಂದು ನನಗೆ ಪ್ರವೇಶ ನಿರಾಕರಿಸಿದ್ದರು’ಎಂದು ಹೇಳಿದ್ದಾರೆ.

ಅಲ್ಲದೆ ಗಾಂಧೀಜಿ ಅರೆಬಟ್ಟೆಯಲ್ಲಿದ್ದರೂ ಕೂಡ ರೌಂಡ್ ಟೇಬಲ್ ಕಾನ್ಪುರೆನ್ಸ್ ಮಾಡೋಕೆ ಬಿಟ್ಟರು. ನಂಗೆ ಊಟ ಮಾಡೋಕೆ ಹೋದಾಗ ಬಿಟ್ಟಿರಲಿಲ್ಲ. ನಿಮ್ಮ ಡ್ರೆಸ್ ಕೋಡ್ ಸರಿಯಲ್ಲ ಎಂದು ಒಳಗೆ ಬಿಡಲಿಲ್ಲ. ನಾನು ಅವತ್ತೆ ಅಂದುಕೊಂಡೇ ನಮ್ದು ಒಂದು ಶಾಸಕರಿಗಳಿಗೆ ಕ್ಲಬ್ ಬೇಕು ಅಂತ. ಇಲ್ಲಿ ಯಾವುದೇ ಡ್ರೆಸ್ ಕೋಡ್ ಇರೋದಿಲ್ಲ. ನಾನು ಇವತ್ತು ಪಂಚೆ ಉಟ್ಟುಕೊಂಡೇ ಉದ್ಘಾಟನೆ ಮಾಡಿದ್ದೇನೆ ಎಂದು ತಮ್ಮ ಹಿಂದಿನ ಅನುಭವ ಹಂಚಿಕೊಂಡಿದ್ದಾರೆ.

Leave A Reply

Your email address will not be published.