The Squirrel: ಈ ಒಂದು ಜೀವಿ ಇದ್ದರೆ ಸಾಕು! ಅಳಿಲು ತೋಟಕ್ಕೆ ಬರುವುದಿಲ್ಲ

Squirrel: ಅಡಿಕೆ ವರ್ಷಕ್ಕೆ ಒಂದೇ ಬಾರಿ ಫಸಲು ಕೊಡುವುದರಿಂದ ಬಂದ ಫಸಲನ್ನು ಕಾಪಾಡಿಕೊಳ್ಳುವುದು ತುಂಬ ಮುಖ್ಯವಾದದ್ದು. ಆದರೆ ಅಳಿಲು ಫಸಲನ್ನು ಹಾಳುಮಾಡುವ ಏಕೈಕ ಪ್ರಾಣಿಯಾಗಿದೆ. ಈ ಅಳಿಲಿನ ಕಾಟವನ್ನು ನೈಸರ್ಗಿಕವಾಗಿ ಹೇಗೆ ತಡೆಯುವುದು ಎಂದು ನೋಡುತ್ತ ಹೋಗೋಣ.

ಹಲವು ರೈತರು ನಾನಾ ರೀತಿಯಲ್ಲಿ ಆಳಿಲಿನ ದಾಳಿಯನ್ನು ತಡೆಯುತ್ತಾರೆ. ಕೆಲವರು ಬಂದೂಕಿನಿಂದ ಹೊಡೆದು ಹಾಕುತ್ತಾರೆ, ಕಲ್ಲನ್ನು ಒಡ್ಡುತ್ತಾರೆ, ಆಹಾರದಲ್ಲಿ ವಿಷ ಬೆರೆಸಿ ಇಡುವುದು ಹೀಗೆ ನಾನಾ ರೀತಿಯಲ್ಲಿ ತಡೆಯಲು ಪ್ರಯತ್ನ ಪಡುತ್ತಾರೆ.

ಅಳಿಲು ಮುಖ್ಯವಾಗಿ ಅಡಿಕೆ ಪಿಚು ಆಗುವ ಸಂಧರ್ಭದಲ್ಲಿ ಆ ಅಡಿಕೆಯ ಪಿಚುಗಳನ್ನು ಕಿತ್ತು ಅದರೊಳಗಿರುವ ದ್ರವರೂಪದ ನೀರನ್ನು ಕುಡಿಯುತ್ತದೆ. ಒಮ್ಮೆಲೆ ಒಂದು ಆಳಿಲು ಇಡೀ ಕಂಕ್ಕಿಯನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅದ್ದರಿಂದ ಇವುಗಳಿಂದ ತೋಟವನ್ನು ರಕ್ಷಣೆ ಮಾಡುವುದು ತುಸು ಕಷ್ಟ.

ನಮ್ಮ ತೋಟದಲ್ಲಿ ಈ ಒಂದು ಜೀವಿ ಇದ್ದರೆ ಸಾಕು. ಅಳಿಲು ಅಡಿಕೆಯ ಪಿಚನ್ನು ಕಿಳುವುದಿರಲಿ, ಮರದ ಹತ್ತಿರ ಸಹ ಸುಳಿಯುವುದಿಲ್ಲ. ಆ ಜೀವಿಯೇ ಓಕೋಪಿಲ್ಲ. ಅಂದರೆ ಕೆಂಜಗ.

ಕೆಂಜಗವನ್ನು ನಾನಾ ಪ್ರದೇಶಗಳಲ್ಲಿ ನಾನಾ ಹೆಸರಿನಿಂದ ಕರೆಯುತ್ತಾರೆ. ಇವುಗಳು ಅಡಿಕೆ ತೋಟದ ರಕ್ಷಕಗಳು ಎಂದು ಕರೆಯಬಹುದು. ಇವುಗಳು ಕೇವಲ ಅಳಿಲನ್ನು ಬರದಂತೆ ಕಾಯುವುದರ ಜೊತೆಗೆ ಹೊಂಬಾಳೆಗೆ ಬೀಳುವ ಹೇನುಗಳನ್ನು ಭಕ್ಷಿಸುವ ಮೂಲಕ ತೋಟವನ್ನು ರಕ್ಷಿಸುತ್ತವೆ.

ಈ ಕೆಂಜಗಗಳು ಎಲೆಗಳನ್ನು ಸೇರಿಸಿ ತಮ್ಮ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ. ಇವುಗಳು ಅಡಿಕೆಯ ಮರದ ಕಂಕ್ಕಿಗಳನ್ನು(ಅಡಿಕೆಯ ಗೊನೆ) ಸೇರಿಸಿಕೊಂಡು ತಮ್ಮ ಗೂಡನ್ನು ನಿರ್ಮಿಸಿಕೊಳ್ಳುತ್ತವೆ. ಇದರಿಂದ ಅಡಿಕೆ ಮರಕ್ಕೆ ಯಾವ ತೊಂದರೆಯೂ ಇಲ್ಲ.

ಇವುಗಳು ಗೂಡು ಕಟ್ಟಿದ ನಂತರ ತೋಟಕ್ಕೆ ಯಾವುದೇ ಪ್ರಾಣಿ ಬಂದರು ಕಡಿಯುವ ಪ್ರವೃತ್ತಿಯನ್ನು ಹೊಂದಿರುತ್ತವೆ. ಮನುಷ್ಯನು ಬಂದರು ಸಹ ಕಡಿಯುತ್ತವೆ. ಮನುಷ್ಯನಿಗೆ ಯಾವುದೇ ಅಪಾಯವಿಲ್ಲ. ಕೆಲ ಕಾಲ ಉರಿಯ ಅನುಭವವಾಗಿ ಸರಿ ಹೋಗುತ್ತದೆ.

ಇದೇ ರೀತಿ ಆಳಿಲು ಸಹ ಅಡಿಕೆ ಮರವನ್ನು ಏರಿದಾಗ ಕಂಕ್ಕಿಯಲ್ಲಿರುವ ಕೆಂಜಗಗಳು ಕಡಿಯುತ್ತವೆ. ಅಳಿಲು ಅಲ್ಲಿಂದಲೇ ಓಡಿ ಹೋಗುತ್ತದೆ. ಜೊತೆಗೆ ಮತ್ತೆ ಆ ಮರದ ಕಡೆ ಆಳಿಲು ಬರುವುದಿಲ್ಲ.

1 ವರ್ಷದಲ್ಲಿ ಕೆಂಜಗಗಳು ಇಡೀ ತೋಟವನ್ನು ಆಕ್ರಮಿಸಿಕೊಳ್ಳುತ್ತವೆ. ಆಗ ಪ್ರತೀ ಮರದಲ್ಲಿಯೂ ತಮ್ಮ ಗೂಡುಗಳನ್ನು ಕಟ್ಟುತ್ತವೆ. ಈ ಮೂಲಕ ಯಾವುದೇ ರಾಸಾಯನಿಕ ಬಳಸದೇ ಪರಿಸರ ಸ್ನೇಹಿಯಾಗಿ ಈ ಸಮಸ್ಯೆಯನ್ನು ಪರಿಹಾರ ಮಾಡುಬಹುದಾಗಿದೆ.

ಒಂದು ಬಾರಿ ಅಳಿಲು ಇದನ್ನು ಗಮನಿಸಿದರೆ ಅವುಗಳು ಆ ತೋಟದ ಕಡೆ ಬರುವುದೇ ಇಲ್ಲ. ಇದು ಖಂಡಿತವಾಗಿಯೂ ನಡೆಯುವ ಘಟನೆಯಾಗಿದೆ. ನಾವು ಕೆಂಜಗವನ್ನು ಸಾಕುವುದರಿಂದ ಪರಿಸರವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ.

ಇನ್ನೂ ಕೆಲವರು ಕೆಂಜಗಗಳು ತೋಟದಲ್ಲಿ ಇಲ್ಲದೆ ಇದ್ದರೇ ಬೇರೆ ಕಡೆಯಿಂದ ತಂದು ಬಿಡುವ ಕೆಲಸ ಸಹ ಮಾಡುತ್ತಾರೆ. ಈ ಜೀವಿಯು ನಿಜವಾಗಿಯೂ ರೈತನ ಮಿತ್ರನಾಗಿ ಕೆಲಸ ಮಾಡುತ್ತದೆ.

Leave A Reply

Your email address will not be published.