Mrunal thakur: ತನ್ನ ದಪ್ಪ ತೊಡೆಗಳ ಬಗ್ಗೆ ನಟಿ ಮೃಣಾಲ್ ಠಾಕೂರ್ ಹೀಗೆ ಹೇಳೋದಾ!!

 

Mrunal tahkur: ಪ್ರಸ್ತುತ ದಕ್ಷಿಣ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ನಟಿ ಮೃನಾಲ್ ಠಾಕೂರ್(Mrunal Takur). ಇತ್ತೀಚೆಗೆ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ಕೂಡ. ಈಕೆಯ ಮಾದಕತೆಗೆ ಸೋಲದ ಹುಡುಗರಿಲ್ಲ. ಇತ್ತೀಚೆಗೆ ನಟಿ ತಾನು ಹೇಗೆ ಬಾಡಿಶೇಮ್​​ಗೆ ಒಳಗಾಗಿದ್ದೇನೆ ಎಂಬುದರ ಬಗ್ಗೆ ತಿಳಿಸಿದ್ದು, ತನ್ನ ದಪ್ಪ ತೊಡೆಗಳ ಬಗ್ಗೆಯೂ ಮನ ಬಿಚ್ಚಿ ಮಾತನಾಡಿದ್ದಾರೆ.

ಹೌದು, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಮೃನಾಲ್, ತನ್ನ ಬಾಡಿಶೇಮ್(Bodyshame) ಬಗ್ಗೆ ಮಾತನಾಡುತ್ತಾ ಯಾರೋ ಒಬ್ಬರು ನಾನು ಸೆಕ್ಸಿಯಾಗಿಲ್ಲ ಎಂದು ಹೇಳಿದ್ದ. ನಾನು ಪಾತ್ರದ ಬಗ್ಗೆ ಅಥವಾ ರೋಲ್ ಬಗ್ಗೆ ಕೇಳಿದಾಗ ಪಾತ್ರವು ಸೆಕ್ಸಿಯಾಗಿದೆ, ಅದು ನಿನಗೆ ಆಗಲ್ಲ ಎಂದು ಅವರು ಹೇಳಿದರು. ಜೊತೆಗೆ ಒಂದು ಪ್ರಾಜೆಕ್ಟ್​​ನಲ್ಲಿ ನನ್ನನ್ನು ಏಕೆ ತೆಗೆದುಕೊಳ್ಳಬೇಕು ಎಂಬುದರ ಕುರಿತು ಬಾಲಿವುಡ್ ಚಲನಚಿತ್ರ ನಿರ್ಮಾಪಕರಿಗೆ ವಿವರಿಸಲು ತಾನು ಬೇಸತ್ತಿದ್ದೆ ಎಂದು ಹಾಯ್ ನನ್ನ ನಟಿ ಹೇಳಿದ್ದಾರೆ.

ಅಲ್ಲದೆ ತಮ್ಮ ದಪ್ಪ ತೊಡೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಮೃನಾಲ್ ನನಗೆ ದಪ್ಪ ತೊಡೆಗಳಿವೆ. ನನಗೆ ಅದರಿಂದ ತೊಂದರೆ ಇಲ್ಲ. ಹಾಗಿರುವಾಗ ನಿಮಗೇನು ತೊಂದರೆ? ಸಹಜವಾಗಿಯೇ ಇದನ್ನು ಮೆಚ್ಚುವರೂ ಇದ್ದಾರೆ. ನಾನು ಜೇಡಿಮಣ್ಣಾಗಿರಲು ಬಯಸುತ್ತೇನೆ, ಇದರಿಂದ ತಯಾರಕರು ನನ್ನ ಪಾತ್ರಕ್ಕೆ ಬೇಕಾದ ಆಕಾರವನ್ನು ನೀಡುತ್ತಾರೆ ಎಂದಿದ್ದಾರೆ.

ಮೃನಾಲ್ ಠಾಕೂರ್ ಅವರು ಲವ್ ಸೋನಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಸಿನಿಮಾ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. ಆದರೆ, ಮೃನಾಲ್ ಮಾತ್ರ ಹೆಸರು ಮಾಡಲಿಲ್ಲ. ಬಾಲಿವುಡ್‌ನಲ್ಲೂ ಅವಕಾಶಗಳು ಸಿಗಲಿಲ್ಲ. ಇಂತಹ ಸಂದರ್ಭದಲ್ಲಿ ಸೀತಾರಾಮಂ ಮತ್ತು ಹಾಯ್ ನಾನ್ನಾ ಸಿನಿಮಾಗಳು ಮೃನಾಲ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ.

Leave A Reply

Your email address will not be published.