RBI Monetary Policy: ಆರ್‌ಬಿಐ ನಿಂದ ಸಿಹಿ ಸುದ್ದಿ, ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ!!!

Share the Article

RBI Repo Rate: ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ಫೆಬ್ರವರಿ 8 ರಂದು ರೆಪೋ ದರಗಳ ಕುರಿತು ತನ್ನ ನಿರ್ಧಾರವನ್ನು ಬಹಿರಂಗಪಡಿಸಿದೆ. ಇಂದು ಬೆಳಗ್ಗೆ 10 ಗಂಟೆಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಂಪಿಸಿಯ ನಿರ್ಧಾರವನ್ನು ಪ್ರಕಟಿಸಿದರು. ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೀತಿ ದರವನ್ನು ಪ್ರಕಟಿಸಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನೀತಿ ದರಗಳಲ್ಲಿ ಅಂದರೆ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೊ ದರವನ್ನು ಕಡಿತಗೊಳಿಸಲಾಗಿಲ್ಲ, ಆದ್ದರಿಂದ ನೀತಿ ಬಡ್ಡಿದರಗಳು ಶೇಕಡಾ 6.50 ರಲ್ಲೇ ಇರುತ್ತವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Temple: ಲವ್ ಮ್ಯಾರೇಜ್ ಗೆ ಈ ದೇವಸ್ಥಾನ ಫುಲ್ ಫೇಮಸ್ ಅಂತೆ! ಎಲ್ಲಿರೋದು ಇದು?

ಭಾರತೀಯ ರಿಸರ್ವ್ ಬ್ಯಾಂಕ್ (RBI) ನೇತೃತ್ವದ ಹಣಕಾಸು ನೀತಿ ಸಮಿತಿ (MPC) ರೆಪೊವನ್ನು 6.5% ನಲ್ಲಿ ಇರಿಸಿದೆ. ಕೇಂದ್ರ ಬ್ಯಾಂಕ್ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಇದು ಸತತ ಆರನೇ ಬಾರಿಯಾಗಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರುತ್ತದೆ. ಹಿಂದಿನ ಡಿಸೆಂಬರ್ ಸಭೆಯಲ್ಲೂ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿಲ್ಲ ಅಥವಾ ಕಡಿತಗೊಳಿಸಿಲ್ಲ.

ಬಡ್ಡಿದರಗಳು ಶೇಕಡಾ 6.50 ನಷ್ಟೇ ಇದ್ದಿರುವುದರಿಂದ, ಬ್ಯಾಂಕ್‌ಗಳಿಂದ ಸಾಲಗಳು ಮತ್ತು ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಆರ್‌ಬಿಐನ ಮಾನದಂಡದ ದರವನ್ನು ಆಧರಿಸಿ ಬಡ್ಡಿದರಗಳನ್ನು ಹೆಚ್ಚಿಸುತ್ತವೆ ಮತ್ತು ಕಡಿಮೆಗೊಳಿಸುತ್ತವೆ.

Leave A Reply