

ವಿಶ್ವ ಆರೋಗ್ಯ ಸಂಸ್ಥೆಯು ಜನರಲ್ಲಿ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಇದರ ಲಕ್ಷಣ ಮೊದಲೇ ತಿಳಿದರೆ ಪ್ರಾಣಾಪಾಯದಿಂದ ಕಾಪಾಡುವ ಸಾಧ್ಯತೆ ಇರುತ್ತದೆ.
ಕಳೆದ 3 ವರ್ಷದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಸಾಯುವವರ ಸಂಖ್ಯೆ ಹೆಚ್ಚಿದೆ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಸಮಸ್ಯೆ ಕಾಡುತ್ತಿದೆ.
ಇದನ್ನೂ ಓದಿ: Intresting News: ಇಲ್ಲಿ ಮಗು ಹುಟ್ಟಿದರೆ ಲಕ್ಷಗಟ್ಟಲೆ ಹಣ ಕೊಡ್ತಾರೆ, ಇದು ಹಿಂದಿದೆ ಈ ಮಹತ್ತರ ಕಾರಣ
ಹೃದಯಾಘಾತ ಮತ್ತು ಪಾರ್ಶ್ವವಾಯು ವಿಗೆ ಕೆಟ್ಟ ಜೀವನ ಶೈಲಿ, ನಿದ್ರೆ ಕೊರತೆ, ಕಳಪೆ ಆಹಾರ ಹಾಗೂ ಕುಟುಂಬದ ಇತಿಹಾಸ ಕಾರಣ ಎಂದು ವೈದ್ಯರು ಹೇಳ್ತಾರೆ. ಯಾವುದೇ ವ್ಯಕ್ತಿಗೆ ಹೃದಯಾಘಾತ ಆಗುವ ಮೊದಲು ಕೆಲವೊಂದು ಸಂಕೇತ ಸಿಗುತ್ತದೆ. ಒಂದು ತಿಂಗಳ ಮೊದಲೇ ವ್ಯಕ್ತಿಗೆ ದೇಹ ಸಿಗ್ನಲ್ ನೀಡಿರುತ್ತದೆ. ಬಹುತೇಕರು ಇದನ್ನು ನಿರ್ಲಕ್ಷ್ಯ ಮಾಡುವ ಕಾರಣ ಜೀವ ಬಿಡಬೇಕಾಗುತ್ತದೆ.
ಹೃದಯಾಘಾತ ಮತ್ತು ಪಾರ್ಶ್ವವಾಯ ಬರುವ ಮೊದಲು ಯಾವೆಲ್ಲ ರೋಗ ಲಕ್ಷಣ ಕಾಣಿಸುತ್ತದೆ ಎನ್ನುವ ಬಗ್ಗೆ ಟ್ವೀಟ್ ಮಾಡಿದೆ
ಹೃದಯಾಘಾತದ ಲಕ್ಷಣ : ಹೃದಯದಲ್ಲಿ ರಕ್ತದ ಒತ್ತಡ ಹೆಚ್ಚಾದಾಗ ಅಥವಾ ಹೆಪ್ಪು ಗಟ್ಟುವ ಮೂಲಕ ಹೃದಯಾಘತ ಸಂಭವಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಪ್ರಕಾರ, ಹೃದಯಾಘಾತಕ್ಕೆ ಒಳಗಾಗುವ ಮುನ್ನ ಹೃದಯದ ಮಧ್ಯ ಭಾಗದಲ್ಲಿ ನೋವು ಉಂಟಾಗುತ್ತದೆ. ಕುತ್ತಿಗೆ ಮತ್ತು ಬೆನ್ನು ನೋವು, ಬೆನ್ನು ಮತ್ತು ತೋಳುಗಳಲ್ಲಿ ವಿಚಿತ್ರವಾದ ನೋವು ಮತ್ತು ಬಿಗಿತ, ನೋವಿನ ಜೊತೆಗೆ ಆಯಾಸ, ತಲೆತಿರುಗುವಿಕೆ, ಹೆಚ್ಚಿದ ಹೃದಯ ಬಡಿತ, ಸಣ್ಣ ತಲೆ ನೋವು ಹಾಗೂ ಬೆವರಿನ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಪಾರ್ಶ್ವವಾಯು ಲಕ್ಷಣ : ಮುಖ, ತೋಳು, ಕಾಲು ಅಥವಾ ದೇಹದ ಒಂದು ಬದಿಯಲ್ಲಿ ಹಠಾತ್ ದೌರ್ಬಲ್ಯ ಅಥವಾ ಮರಗಟ್ಟುವಿಕೆ. ಗೊಂದಲ. ಮಾತನಾಡಲು ಸಮಸ್ಯೆ, ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಇರುವುದು, ದೃಷ್ಟಿ ಸಮಸ್ಯೆ. ಒಂದು ಅಥವಾ ಎರಡೂ ಕಣ್ಣಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು.
ವರದಿ ಪ್ರಕಾರ, ಕಳೆದ ವರ್ಷ ಹಠಾತ್ ಸಾವಿನ ಅಂಕಿಅಂಶಗಳನ್ನು ನೋಡಿದರೆ 14 ರಷ್ಟು ಜನ ಹೃದಯಾಘಾತಕ್ಕೆ ಸಾವನ್ನಪ್ಪಿದ್ದಾರೆ. 2022 53 ಜನ ಹಠಾತ್ ಸಾವನ್ನಪ್ಪಿದ್ದು. ಶೇಕಡಾ 57 ರಷ್ಟು ಹೃದಯಾಘಾತಕ್ಕೆ ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ಕ್ಯಾನ್ಸರ್ ಗಿಂತ ಹೆಚ್ಚು ಸಾವನಪ್ಪಿರುವವರದ್ದು. ಭಾರತದಲ್ಲಿ ಅತಿ ಹೆಚ್ಚು ಜನರು ಹೃದಯಾಘಾತದಿಂದ ಸಾಯುವ ರಾಜ್ಯ ಮಹಾರಾಷ್ಟ್ರ. ಎರಡನೇ ಸ್ಥಾನದಲ್ಲಿ ಕೇರಳ ಇದೆ.
ಪುರುಷರನ್ನು ಹೆಚ್ಚು ಕಾಡುತ್ತೆ
ಮಹಿಳೆಯರಿಗಿಂತ ಪುರುಷರು ಹೆಚ್ಛಿನ ಸಂಖ್ಯೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದಾರೆ.ಪುರುಷರ ಸಂಖ್ಯೆ 28 ಸಾವಿರ ಇದ್ದರೆ ಮಹಿಳೆಯರ ಸಂಖ್ಯೆ ಸುಮಾರು 22 ಸಾವಿರ ಇದೆ. ಯಾವುದು ಅತಿಯಾದರು ಆರೋಗ್ಯ ಕೆಡುತ್ತದೆ ಎನ್ನುತ್ತಾರೆ ವೈದ್ಯರು.












