Heart Attack: ಖ್ಯಾತ ಸೈಕ್ಲಿಸ್ಟ್‌ ಹಾಗೂ ಫಿಟ್ನೆಸ್‌ ತರಬೇತುದಾರ ಅನಿಲ್‌ ಕಡ್ಸೂರ್‌ ಹೃದಯಾಘಾತಕ್ಕೆ ಬಲಿ!

Share the Article

Anil Kadsur: ಫಿಟ್ನೆಸ್ ಐಕಾನ್ ಮತ್ತು ಬೆಂಗಳೂರಿನ ಖ್ಯಾತ ಸೈಕ್ಲಿಸ್ಟ್ ಅನಿಲ್ ಕಡಸೂರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 45ರ ಹರೆಯದ ಕಡಸೂರ್ ಸತತ 42 ತಿಂಗಳ ಕಾಲ ದಿನಕ್ಕೆ 100 ಕಿಲೋಮೀಟರ್ ಸೈಕಲ್ ಓಡಿಸಿ ದಾಖಲೆ ಬರೆದಿದ್ದರು. ಸೈಕ್ಲಿಂಗ್ ಇಷ್ಟ ಪಡುವವರಿಗೆ ಇವರು ಎಷ್ಟು ಸ್ಫೂರ್ತಿ ನೀಡಿದ್ದಾರೆ ಎಂದರೆ ಅನೇಕ ಸೈಕ್ಲಿಸ್ಟ್‌ಗಳು ಅವರನ್ನು ಭೇಟಿಯಾಗಲು ಕಾಯುತ್ತಿದ್ದರು.

ಇದನ್ನೂ ಓದಿ: U.T.Khader: ಶಾಸಕರಿಗೆ ಐಐಎಂನಲ್ಲಿ ತರಬೇತಿ- ಯು.ಟಿ.ಖಾದರ್

Heart Attack

42 ತಿಂಗಳ ಕಾಲ ನಿರಂತರವಾಗಿ ದಿನಕ್ಕೆ 100 ಕಿಲೋಮೀಟರ್ ಸೈಕ್ಲಿಂಗ್ ಮಾಡುವ ಗುರಿಯನ್ನು ಸಾಧಿಸಿದ್ದೇನೆ ಎಂದು ಜನವರಿ 31 ರಂದು ಅನಿಲ್ ಕಡಸೂರ್ ಸಾಮಾಜಿಕ ಜಾಲತಾಣಗಳಲ್ಲಿ ಖುಷಿಯಿಂದ ಘೋಷಿಸಿದ್ದರು. ಅದೇ ರಾತ್ರಿ ಅವರ ಆರೋಗ್ಯ ಹದಗೆಟ್ಟಿದ್ದು, ಹೃದಯಾಘಾತಕ್ಕೊಳಗಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್, ಅವರು ಫೆ.2 ರಂದು ಬೆಳಿಗ್ಗೆ ನಿಧನರಾಗಿರುವುದಾಗಿ ವರದಿಯಾಗಿದೆ.

Leave A Reply