Poonam bandey: ನಟಿ ಪೂನಂ ಪಾಂಡೆ ಶವ ನಾಪತ್ತೆ!!

Share the Article

Poonam pandey: ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ಇನ್ನು ನೆನಪು ಮಾತ್ರ. ಗರ್ಭಕಂಠಕ ಕ್ಯಾನ್ಸರ್ ನಿಂದ ಅತಿ ಚಿಕ್ಕ ವಯಸ್ಸಿನಲ್ಲೇ ನಟಿ ಸೃವನ್ನಪ್ಪಿದ್ದು ಅಭಿಮಾನಿಗಳಿಗೆ ಶಾಕ್‌ ಕೊಟ್ಟಿತ್ತು. ಆದರೆ ಈ ಸಾವಿನ ಬಗ್ಗೆ ಹಲವು ಅನುಮಾನಗಳು ಕೂಡ ಹುಟ್ಟಿಕೊಂಡಿದ್ದವು. ಈ ಬೆನ್ನಲ್ಲೇ ನಟಿಯ ಶವ ಮಿಸ್ಸಿಂಗ್ ಎಂಬ ಸುದ್ದಿ ಕೇಳಿಬರುತ್ತಿದೆ.

ಇದನ್ನೂ ಓದಿ: HD Devegowda: ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರದು, ಮುಂದೆ ನಾನು ಹಾಕಲ್ಲ – ದೇವೇಗೌಡರಿಂದ ಶಾಕಿಂಗ್ ಸ್ಟೇಟ್ಮೆಂಟ್!!

ಹೌದು, ಪೂನಂ ಸತ್ತ ವಿಚಾರ ಸೋಷಿಯಲ್ ಮೀಡಿಯಾಗಳಿಂದ ಲಭ್ಯವಾಗಿದೆಯೇ ವಿನಃ ನಟಿಯ ನಿಧನ ಸುದ್ದಿ ಕುರಿತು ಆಸ್ಪತ್ರೆ ಮೂಲಗಳಿಂದಾಗಲಿ, ಪೂನಂ ಕುಟುಂಬಸ್ಥರಿಂದಾಗಲಿ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಇಷ್ಟು ಸಾಲದೆಂಬಂತೆ ಪೂನಂ ಪಾಂಡೆಯ ಪಾರ್ಥಿವ ಶರೀರ ಎಲ್ಲಿಯೂ, ಯಾರಿಗೂ ಕಾಣಿಸುತ್ತಿಲ್ಲ. ಆಕೆ ವಾಸಿಸುತ್ತಿದ್ದ ಕಟ್ಟಡದಲ್ಲೂ ಈ ವಿಷಯದ ಬಗ್ಗೆ ಯಾರೂ ಏನೂ ಬಾಯಿ ಬಿಡುತ್ತಿಲ್ಲ. ಹೀಗಾಗಿ ನಟಿಯ ಸಾವಿನ ಸುತ್ತ ಹಲವು ಅನುಮಾನಗಳು ಎದ್ದಿವೆ.

ಇನ್ನು ಪೂನಂ ಪಾಂಡೆ ಸಾವೀಗೀಡಾಗಿದ್ಧು ಗರ್ಭಕಂಠಕ ಕ್ಯಾನ್ಸರ್ ನಿಂದಾಗಿ ಎಂದು ವರದಿಯಾಗಿದೆ. ಆದರೀಗ ನಟಿಯ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಪೂನಂ ಕ್ಯಾನ್ಸರ್‌ನಿಂದ ಸಾವಾಗೀಡಾಗಿಲ್ಲ, ಡ್ರಗ್ ಓವರ್ ಡೋಸ್‌ನಿಂದ ಸಾವಾಗಿದೆ ಅನ್ನೋ ಮಾಹಿತಿಗಳೂ ಹೊರಬಿದ್ದಿದೆ. ಆದರೆ ನಟಿಯ ಪಾರ್ಥಿವ ಶರೀರವೇ ಎಲ್ಲೂ ಕಾಣುತ್ತಿಲ್ಲ.

Leave A Reply