Ram Mandir Pranpratishta: ಶ್ರೀರಾಮ ರ್ಯಾಲಿ ನಡೆದ ಜಾಗದಲ್ಲಿ ಗಲಾಟೆ, ಮೊಳಗಿದ ಬುಲ್ಡೋಜರ್‌ ಅಬ್ಬರ, ಕಟ್ಟಡ ನೆಲಸಮ!!

Ram Mandir Pranpratishta: 500 ವರ್ಷಗಳ ಬಳಿಕ ಶ್ರೀರಾಮ ತನ್ನ ಭವ್ಯ ಮಂದಿರಲ್ಲಿ ವಿರಾಜಮಾನನಾಗಿದ್ದಾನೆ. ಇದೇ ಸಮಯದಲ್ಲಿ ಶ್ರೀರಾಮ ಶೋಭಾಯಾತ್ರೆ ಹಲವೆಡೆ ನಡೆದಿದೆ. ಮುಂಬೈನಲ್ಲಿ ನಡೆದ ಶೋಭಯಾತ್ರೆ ಮೇಲೆ ಅನ್ಯಕೋಮಿನ ಗುಂಪೊಂದು ಹಲ್ಲೆ ನಡೆಸಿತ್ತು. ಈ ಘಟನೆ ಸಂಬಂಧ ವೀಡಿಯೋ ಕೂಡಾ ವೈರಲ್‌ ಆಗಿತ್ತು. ಈ ಘಟನೆ ಕುರಿತು ಒಂದೇ ದಿನಕ್ಕೆ ಮಹಾರಾಷ್ಟ್ರ ಸರಕಾರ ಹಲವರನ್ನು ಬಂಧಿಸಿದ್ದು, ಅಷ್ಟು ಮಾತ್ರವಲ್ಲದೇ ಈ ಘಟನೆ ನಡೆದ ಮೀರಾ ರಸ್ತೆಯಲ್ಲಿ ಅಕ್ರಮ ಕಟ್ಟಡ, ಅಂಗಡಿ ಮುಂಗಟ್ಟು, ಹಾಗೂ ಮನೆಗಳನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಿದೆ.

ಘಟನೆ ನಡೆದ ಮೀರಾ ರಸ್ತೆಯಲ್ಲಿ ಭಾರೀ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಸರಕಾರ ನೇರವಾಗಿ ಇದೀಗ ಬುಲ್ಡೋಜರ್‌ ಹತ್ತಿಸಿದೆ.

ಬರೋಬ್ಬರಿ 200 ಕ್ಕೂ ಅಧಿಕ ಜನರು ದಾಳಿ ನಡೆಸಿತ್ತು. ಹಿಂದೂಗಳ ಶ್ರೀರಾಮನ ಶೋಭಯಾತ್ರೆ ಮೇಲೆ ಭೀಕರ ದಾಳಿಯಾಗಿ, ಹಲವಾರು ಮಂದಿ ಗಾಯಗೊಂಡಿದ್ದು, ಜೊತೆಗೆ ಹಲವು ಕಾರುಗಳನ್ನು ಕೂಡಾ ಜಖಂ ಗೊಳಿಸಲಾಗಿತ್ತು. ಬಂಧಿತರೆಲ್ಲರೂ ಮೀರಾ ರಸ್ತೆಯಲ್ಲಿ ಅಂಗಡಿ ಮುಂಗುಟ್ಟುಗಳಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ಮಾಲೀಕರು ಆಗಿದ್ದಾರೆ. ಪೂರ್ವನಿಯೋಜಿತ ದಾಳಿ ಇದಾಗಿರುವುದರ ಕುರಿತು ಮಾಹಿತಿ ಪಡೆದ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಇದೀಗ ಬಲೆ ಬೀಸಿದ್ದಾರೆ.

 

Leave A Reply

Your email address will not be published.