Parliment election 2024: ಲೋಕಸಭಾ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ !!

Parliment election 2024: ಇಡೀ ದೇಶದ ಜನ ಕಾತರವಾಗಿ ಕಾದಿದ್ದ ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟ ಆಗಿದ್ದು, ಕೇಟದ್ರ ಚುನಾವಣೆ ಆಯೋಗ(Central election commission)ಇದನ್ನು ಘೋಷಣೆ ಮಾಡಿದೆ.

ಇದನ್ನೂ ಓದಿ: Bihar: BJP ಜತೆ ಮತ್ತೆ ನಿತೀಶ್ ಕುಮಾರ್ ಮೈತ್ರಿ? ಏಕಾಏಕಿ ರಾಜ್ಯಪಾಲರ ಬೇಟಿಯಾದ ಸಿಎಂ!! ಬಿಹಾರ ರಾಜಕೀಯದಲ್ಲಿ ಮಹಾನ್ ಸಂಚಲನ!!

ಹೌದು, ಕೇಂದ್ರ ಚುನಾವಣಾ ಆಯೋಗದಿಂದ ಹೊಸ ಘೋಷಣೆ ಹೊರಬಿದ್ದಿದ್ದು, 2024ರ ಲೋಕಸಭಾ ಚುನಾವಣೆಯ ತಾತ್ಕಾಲಿಕ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಲೋಕಸಭಾ ಚುನಾವಣೆಯನ್ನು(Parliament election)ಏಪ್ರಿಲ್ 16 ರಂದು ತಾತ್ಕಾಲಿಕವಾಗಿ ನಡೆಸಲಾಗುವುದು ಎಂದು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ಪತ್ರ ಬರೆದಿದೆ.

ಇನ್ನು ಇದರೊಂದಿಗೆ ಕೆಲವು ಮಹತ್ವದ ಸೂಚನೆಗಳನ್ನು ನೀಡಿರುವ ಆಯೋಗವು ಲೋಕಸಭಾ ಚುನಾವಣೆಗೆ ತಯಾರಿಗಳು ನಡೆಯುತ್ತಿದೆ. ಚುನಾವಣಾ ಆಯೋಗದ ಅಧಿಕಾರಿಗಳ ಪೂರ್ವ ತಯಾರಿಗಾಗಿ ಈ ದಿನಾಂಕ ನೀಡಲಾಗಿದೆ. ಎಪ್ರಿಲ್‌ನಿಂದ ಮೇ ವರೆಗೆ ಲೋಕಸಭಾ ಚುನಾವಣೆ ಮತದಾನ ನಡೆಯಲಿದೆ. ವಿವಿಧ ಹಂತದಲ್ಲಿ ಮತದಾನ ನಡೆಯಲಿದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಪೂರ್ವ ತಯಾರಿ ನಡೆಸಲು ಅನುಕೂಲವಾಗವಂತೆ ಸಂಭಾವ್ಯ ದಿನಾಂಕ ನೀಡಲಾಗಿದೆ. ಹೀಗಾಗಿ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಎಂದು ಸ್ಪಷ್ಟಪಡಿಸಿದೆ.

2 Comments
  1. […] ಇದನ್ನೂ ಓದಿ: Parliment election 2024: ಲೋಕಸಭಾ ಚುನಾವಣೆ ದಿನಾಂಕ ಘೋಷಿಸ… […]

Leave A Reply

Your email address will not be published.