BBK Season 10: ಪ್ರತಾಪ್‌ಗೆ ʼಕಾಗೆʼ ಎಂದ ಇಶಾನಿಯಿಂದ ಬಂದು ಸ್ಪಷ್ಟನೆ!!!

BBK Season 10 Ishani: ಈ ಬಾರಿಯ ಬಿಗ್‌ಬಾಸ್‌ ನಿಜಕ್ಕೂ ಬಹಳ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ಬಾರಿ ಬಿಗ್‌ಬಾಸ್‌ನಲ್ಲಿ ಹಲವು ಗಲಾಟೆ, ರಂಪಾಟ ನಡೆದದ್ದೇ ಜಾಸ್ತಿ. ಅದರಲ್ಲೂ ಇತ್ತೀಚೆಗೆ ಹಳೆ ಕಂಟೆಂಸ್ಟೆಂಟ್‌ಗಳು ಮನೆಗೆ ಎಂಟ್ರಿ ಕೊಟ್ಟು, ಇಶಾನಿ ಅವರು ಪ್ರತಾಪ್‌ ನಗ್ಗೆ ಹಗುರವಾಗಿ ಮಾತನಾಡಿ, ಕಾಗೆ ಕಕ್ಕ ಎಂದು ಹೇಳಿದ್ದರು. ಇದಕ್ಕೂ ಇಶಾನಿ ವಿರುದ್ಧವೇ ತಿರುಗಿ ಬಿದ್ದು, ಬಹಳಷ್ಟು ಟ್ರೋಲ್‌ ಕೂಡಾ ಆಯಿತು.

ಈ ಕುರಿತು ಕಿಚ್ಚ ಸುದೀಪ್‌ ಅವರು ಕೂಡಾ ಇಶಾನಿ ಅವರ ಈ ಮಾತಿಗೆ ಚೆನ್ನಾಗಿಯೇ ಕ್ಲಾಸ್‌ ತಗೊಂಡಿದ್ದರು. ಇಶಾನಿ ಮಾತು ಖಂಡಿಸಿ ಲಕ್ಷಕ್ಕೂ ಹೆಚ್ಚು ಕಮೆಂಟ್‌ಗಳು ಬರತೊಡಗಿತು. ಇದೀಗ ಈ ಕುರಿತು೦ ಇಶಾನಿ ಅವರು ಸ್ಪಷ್ಟನೆ ನೀಡಿದ್ದಾರೆ.

ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಇಶಾನಿ ಅವರು ೦ ಸ್ಪಷ್ಟನೆ ನೀಡಿದ್ದು, ನಾನು ಕೆಲವೊಂದು ಪದ ಬಳಸಿದ್ದೆ ಅದು ತಪ್ಪಾಗಿದೆ. ಜನರಿಗೂ ಹಾಗೂ ಸುದೀಪ್‌ ಸರ್‌ಗೆ ಬೇಜಾರಾಗಿದೆ. ನಾನು ಆ ಥರ ಅಲ್ಲ. ಕಾಗೆ ಒಂದು ಬುದ್ಧಿವಂತ ಪಕ್ಷಿ. ಅದು ಅಬಸರ್ವ್‌ ಮಾಡುತ್ತೆ. ಆಮೇಲೆ ಹೋಗಿ ಊಟ ಮಾಡುತ್ತದೆ. ಸಿಂಪತಿ ಬಗ್ಗೆ ಮಾತನಾಡಿದೆ. ಆ ಮಾತಿಗೆ ನಾನು ಬದ್ಧವಾಗಿದ್ದೇನೆ ಎಂದು ಇಶಾನಿ ಹೇಳಿದ್ದಾರೆ.

Leave A Reply

Your email address will not be published.