Shimogga: ಮದುವೆಗೆ 13 ದಿನ ಬಾಕಿ ಇರುವಾಗಲೇ ನೇಣಿಗೆ ಶರಣಾದ ಮದುಮಗಳು!! ಕಾರಣ??

Shimogga: ಇನ್ನೇನು ಕೇವಲ 13 ದಿನ ಇರುವಾಗಲೇ ಮದುಮಗಳು ಮನೆಯ ಪಕ್ಕದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಈ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಎಂಕಾಂ ಪದವೀಧರೆಯಾಗಿರುವ ಯುವತಿ ಇದೀಗ ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ. ಶಿವಮೊಗ್ಗದಲ್ಲಿ ಕಳೆದೊಂದು ತಿಂಗಳಲ್ಲಿ ಇದು ಮೂರನೇ ಯುವತಿಯ ಆತ್ಮಹತ್ಯೆ. ವಿದ್ಯಾವಂತ ಯುವತಿಯರೇ ಈ ನಿರ್ಧಾರ ತೆಗೆದುಕೊಳ್ಳುವುದು ಏಕೆ ಎನ್ನುವುದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ.

ತೀರ್ಥಹಳ್ಳಿ ತಾಲೂಕಿ ಕಟ್ಟೆಹಕ್ಲು ಚೈತ್ರ (26) ಮೃತ ಯುವತಿ. ಚೈತ್ರ ಕಟ್ಟಹಕ್ಲಿನ ಮೆಡಿಕಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಫೆ.4 ರಂದು ಮದುವೆ ನಿಶ್ಚಯವಾಗಿತ್ತು. ಇಂದು ಮನೆಯ ಸ್ನಾನದ ಕೊಠಡಿ ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚೈತ್ರಾ ಮಾನಸಿಕ ಅಸ್ವಸ್ಥತೆಯಿಂದ ಹಾಗೂ ಇತರೆ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮದುವೆಗೆ ಎಲ್ಲ ಸಿದ್ಧತೆ ಮಾಡಲಾಗಿತ್ತು. ಇದ್ದಕ್ಕಿದ್ದಂತೆ ಮನೆಯಲ್ಲಿ ನಿನ್ನೆ ಮದುವೆ ಬೇಡ ಎಂದು ಚೈತ್ರಾ ಹೇಳಿದ್ದಳಂತೆ. ಇದಕ್ಕೆ ಮನೆಮಂದಿ ಎಲ್ಲಾ ಸಿದ್ಧತೆ ಮುಗಿದಿರುವಾಗ ಯಾಕೆ ಬೇಡ? ಮದುವೆಯಾದ ಮೇಲೆ ಎಲ್ಲಾ ಸರಿಯಾಗುತ್ತದೆ ಎಂದು ಸಮಾಧಾನ ಮಾಡಿದ್ದರಂತೆ. ಆದರೆ ಚೈತ್ರಾ ರಾತ್ರಿ ವೇಳೆ ನೇಣಿಗೆ ಕೊರಳೊಡ್ಡಿದ್ದಾರೆ. ಈ ಕುರಿತು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ ಕಳೆದೊಂದು ತಿಂಗಳಲ್ಲಿ ಇದು ಮೂರನೇ ಯುವತಿಯ ಆತ್ಮಹತ್ಯೆ ಘಟನೆ ಸಂಭವಿಸಿದೆ. ಅದೂ ಕೂಡ ಕಾಲೇಜು ಶಿಕ್ಷಣ ಪಡೆದಿರುವ ಯುವತಿಯರೇ ನೇಣಿಗೆ ಶರಣಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

 

 

Leave A Reply

Your email address will not be published.