Davanagere: ಬಾಲರಾಮನ ಪ್ರಾಣಪ್ರತಿಷ್ಠಾಪನೆ; ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ ವೇಳೆ ಕೋತಿರಾಯ ಪ್ರತ್ಯಕ್ಷ!! ಜನರಿಗೆ ಅಚ್ಚರಿಯೋ ಅಚ್ಚರಿ

Share the Article

Davanagere: ಜ22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಕಾರಣದಿಂದ ದಾವಣಗೆರೆ ತಣಿಗೆರೆ ಗ್ರಾಮಸ್ಥರು ಆಂಜನೇಯ ವಿಗ್ರಹ ಪ್ರತಿಷ್ಠಾಪನೆ ಮಾಡಲು ಸಿದ್ಧತೆ ನಡೆಸುತ್ತಿರುವಾಗ ಒಂದು ಅಚ್ಚರಿ ನಡೆದಿದೆ. ಆಂಜನೇಯ ಪ್ರತಿಷ್ಠಾಪನೆ ಸಂದರ್ಭ ಯಾವತ್ತೂ ಎಲ್ಲೂ ಕಾಣದ ಮುಸಿಯಾ ಪ್ರತ್ಯಕ್ಷವಾಗಿದೆ.

ಇದು ಗ್ರಾಮಸ್ಥರಲ್ಲಿ ನಿಜಕ್ಕೂ ಅಚ್ಚರಿ ಮೂಡಿಸಿದೆ. ಈಘಟನೆ ಚನ್ನಗಿರಿ ತಾಲೂಕಿನ ತಣಿಗೆರೆ ಗ್ರಾಮದಲ್ಲಿ ನಡೆದಿದೆ. ಸರಿಯಾಗಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆ ಸಮಯದಲ್ಲಿ ಈ ಕೋತಿ ಕಾಣಿಸಿಕೊಂಡಿದ್ದು, ಅಲ್ಲಿ ತನಕ ಈ ಕೋತಿಗಳು ಎಲ್ಲೂ ಕಾಣಿಸಿಕೊಂಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ಘಟನೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸ್ವತಃ ಆಂಜನೇಯನೇ ಗ್ರಾಮಕ್ಕೆ ಆಗಮಿಸಿದ್ದಾಗಿ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

 

Leave A Reply